newsics.com
ಐಪಿಎಲ್ 2025ರ ಫೈನಲ್ ಪಂದ್ಯ ಇಂದು ಸಂಜೆ 7:30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮೊದಲ ಐಪಿಎಲ್ ಟ್ರೋಫಿಗಾಗಿ ಕಾದಾಡಲಿವೆ. ಈ ನಿರ್ಣಾಯಕ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಆರ್‌ಸಿಬಿಗೆ ಒಂದು ದೊಡ್ಡ ಸಿಹಿಸುದ್ದಿ ಸಿಕ್ಕಿದೆ. ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ತಂಡಕ್ಕೆ ಮರಳಿದ್ದಾರೆ.
ಹೌದು, ಮೇ 29 ರಂದು ನಡೆದಿದ್ದ ಕ್ವಾಲಿಫೈಯರ್ -1 ರಲ್ಲಿ ತಂಡದ ಪರ ಆಡಿದ್ದ ಸಾಲ್ಟ್, ಪಂದ್ಯ ಮುಗಿದ ನಂತರ ತಮ್ಮ ದೇಶಕ್ಕೆ ಮರಳಿದ್ದರು. ಐಪಿಎಲ್ ಫೈನಲ್‌ಗೆ ಮುನ್ನ ತಮ್ಮ ಮಗುವಿನ ಜನನದಿಂದಾಗಿ ತಾಯ್ನಾಡಿಗೆ ಹೋಗಿದ್ದ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರು ಅಹಮದಾಬಾದ್‌ಗೆ ಮರಳಿದ್ದಾರೆ. ತಂಡದೊಂದಿಗೆ ಸೇರಿಕೊಂಡಿರುವ ಸಾಲ್ಟ್, ಫೈನಲ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟರ್ ಫಿಲ್ ಸಾಲ್ಟ್ ಅಹ್ಮದಾಬಾದ್ಗೆ ವಾಪಸ್ ಆಗಿದ್ದಾರೆ. ವರದಿಗಳ ಪ್ರಕಾರ ಇಂದು ಬೆಳಗ್ಗೆ ಸಾಲ್ಟ್, ಗುಜರಾತ್ನ ಅಹ್ಮದಾಬಾದ್ಗೆ ಆಗಮಿಸಿದ್ದಾರೆ.
ಸಾಲ್ಟ್ 18 ಪಂದ್ಯಗಳಲ್ಲಿ 387 ರನ್‌ಗಳನ್ನು ಗಳಿಸಿದ್ದು, 4 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 180ಕ್ಕೂ ಅಧಿಕವಿದ್ದು, ಪವರ್‌ಪ್ಲೇ ಓವರ್‌ಗಳಲ್ಲಿ ಆಕ್ರಮಣಕಾರಿ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿಯೊಂದಿಗಿನ ಆರಂಭಿಕ ಜೊತೆಯಾಟವು ಆರ್‌ಸಿಬಿಯ ದೊಡ್ಡ ಸ್ಕೋರ್‌ಗಳಿಗೆ ಆಧಾರವಾಗಿದೆ