newsics.com
ಪಾಕಿಸ್ತಾನದ ಫೇಮಸ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ 17 ವರ್ಷದ ಸನಾ ಯುಸೂಫ್ ಮನೆಯೊಳಗೆ ನುಗ್ಗಿ ಗುಂಡಿಕ್ಕಿ ಕೊದಿರುವ ಘಟನೆ ಇಸ್ಲಾಮಾಬಾದ್‌ನ ಜಿ -13 ಸೆಕ್ಟರ್‌ನಲ್ಲಿ ನಡೆದಿದೆ.
ಜೂನ್ 2ರ ಸೋಮವಾರ ರಾತ್ರಿ ಇಸ್ಲಾಮಾಬಾದ್‌ನ ಜಿ -13 ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದ್ದು, ಶಂಕಿತನ ಗುರುತು ಪತ್ತೆಯಾಗಿಲ್ಲ.
ಸನಾ ಯುಸೂಫ್ ಮನೆ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಒಳಗೆ ಬಂದು ಸಮೀಪದಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆಗೂ ಮುನ್ನ ಸನಾ ಯುಸೂಫ್ ಅಪರಿಚಿತ ವ್ಯಕ್ತಿ/ಶೂಟರ್ ಜೊತೆ ಕೆಲ ಸಮಯದವರೆಗೆ ಮನೆ ಹೊರಗೆ ಮಾತನಾಡುತ್ತಿದ್ದಳು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಮನೆಯೊಳಗೆ ನುಗ್ಗಿದ ಶಂಕಿತ ಹಲವು ಸುತ್ತು ಗುಂಡು ಹಾರಿಸಿದ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಸನಾ ಯುಸೂಫ್‌ಗೆ ಎರಡು ಗುಂಡುಗಳು ತಗುಲಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಸನಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (PIMS) ರವಾನಿಸಲಾಗಿದೆ. ಶಂಕಿತನ ಗುರುತು ಪತ್ತೆಯಾಗಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೊಲೆಗೆ ಕಾರಣವೇನು?
ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಪೊಲೀಸರು ವೈಯಕ್ತಿಕ, ಸಾಮಾಜಿಕ ಉದ್ವಿಗ್ನತೆ, ದ್ವೇಷ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಕಾರಣವೇನು ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಯಾರು ಈ ಸನಾ ಯೂಸುಫ್?
ಚಿತ್ರಾಲ್ ಮೂಲದ ಸೋಶಿಯಲ್ ಮೀಡಿಯಾ ಟಿಕ್ ಟಾಕ್ ಕ್ರಿಯೇಟರ್ ಸನಾ ಯುಸೂಫ್ ಅಪಾರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 4 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಸನಾ ಯುಸೂಫ್ ಕೊಲೆ ವಿಷಯ ಕೇಳಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.