newsics.com
ಕೊಡುಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಜಲಾಶಯ ಭರ್ತಿಯಾಗುವತ್ತ ಸಾಗಿದೆ. ಅಣೆಕಟ್ಟು ಭರ್ತಿಗಳಷ್ಟೇ ಬಾಕಿ ಉಳಿದಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಮೇ ಅಂತ್ಯದಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಇಂದು ಅಥವಾ ಬುಧವಾರ ಹಾರಂಗಿ ಜಲಾಶಯದ ಕ್ರಸ್ಟ್ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ.
ಹಾಗಾಗಿ, ನದಿ ದಂಡೆಯಲ್ಲಿ ವಾಸಿಸುತ್ತಿರುವವರು ಮುಂಜಾಗ್ರತೆ ವಹಿಸಬೇಕು, ಪ್ರವಾಹದ ಎಚ್ಚರಿಕೆಯನ್ನು ಕಾವೇರಿ ನೀರಾವರಿ ನಿಗಮ ನೀಡಿದೆ.
ಹಾರಂಗಿ ಜಲಾಶಯದ ಮಟ್ಟ ಮಂಗಳವಾರ 2851.13 ಅಡಿಗೆ ಏರಿಕೆಯಾಗಿದ್ದು, ಭರ್ತಿಯಾಗಲು 8 ಅಡಿಗಳಷ್ಟೇ ಉಳಿದಿದೆ. (ಗರಿಷ್ಠ ಮಟ್ಟ 2,859 ಅಡಿ) ಸದ್ಯ, 1,541 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ
.