newsics.com
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸ್ಯ ನಟ ಮಡೆನೂರು ಮನು ಅವರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ನಟನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ನನಗೆ ಆಗಿರುವ ನೋವುಗಳನ್ನು ಪೊಲೀಸ್ ಅಧಿಕಾರಿಗಳಿಗೆ ಹೇಳಿಕೊಂಡಿದ್ದೇನೆ. ಆತ ನನ್ನ ಮೇಲೆ ಏನು ಆರೋಪ ಮಾಡಿದ್ದಾನೋ ಗೊತ್ತಿಲ್ಲ. ಕಳೆದ ಎರಡ್ಮೂರು ದಿನಗಳಿಂದ ನಾನು ಮೆಡಿಕಲ್ ಟೆಸ್ಟ್ನಲ್ಲಿದ್ದೆ. ಆತ ನನ್ನನ್ನು ಎಲ್ಲಾ ರೀತಿಯಿಂದಲೂ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತ ನಟಿ ತಮಗೆ ಆಗಿರುವ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮನು ನನಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಕಳೆದ ಶನಿವಾರ ನನ್ನ ಮನೆಗೆ ಬಂದು ನನಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ನನಗೆ ಪ್ರಜ್ಞೆ ಇಲ್ಲದಂತಹ ವೇಳೆ ಏನೇನೋ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ.
ನಾವಿಬ್ಬರು 7 ವರ್ಷಗಳಿಂದ ಸ್ನೇಹಿತರು. ಆತ ನನಗೆ ಬೆಸ್ಟ್ ಫ್ರೆಂಡ್. ನಾವಿಬ್ಬರು ತುಂಬಾ ಕ್ಲೋಸ್ ಆಗಿದ್ವಿ. ನನಗೆ ಅಪ್ಪ, ಅಮ್ಮ ಯಾರೂ ಇಲ್ಲದಿರೋದನ್ನು ಮಿಸ್ ಯೂಸ್ ಮಾಡಿಕೊಳ್ಳಲು ಶುರುಮಾಡಿದ. 2022ರಲ್ಲಿ ಕಾರ್ಯಕ್ರಮ ಒಂದರ ಸಂಬಂಧ ಹಣ ನೀಡಲು ಬಂದು ಲೈಂಗಿಕ ದೌರ್ಜನ್ಯ ನಡೆಸಿದ. ಇದರಿಂದ ಆಘಾತಕ್ಕೆ ಒಳಗಾದೆ. ಏನು ಮಾಡಬೇಕು ಅಂತಾ ಗೊತ್ತಾಗಲಿಲ್ಲ. ಯಾಕೆಂದರೆ ಆತ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದ. ಪೊಲೀಸರಿಗೆ ಮಾಹಿತಿ ನೀಡಬೇಕೋ, ಬಿಡಬೇಕೋ ಎಂಬ ಚಿಂತೆಯಲ್ಲಿ ಬಿದ್ದಿದೆ
ನನ್ನ ಮೇಲೆ ಅತ್ಯಾಚಾರ ಮಾಡಿ ನನಗೆ ತಾಳಿ ಕಟ್ಟಿದ್ದಾನೆ. ಅತ್ಯಾಚಾರ ಮಾಡಿ ತಾಳಿ ಕಟ್ಟಿದ್ರೆ ನಾನು ಒಪ್ಪಲ್ಲ ಅಂದೆ. ನಮ್ಮ ಅಪ್ಪನಿಗೂ ಇಬ್ಬರು ಹೆಂಡ್ತಿರು ನನಗೆ ನಿನ್ನ ದೇವ್ರು ಕೊಟ್ಟಿರೋದು. ನಾನು ತಿಂಗಳಲ್ಲಿ ಆ ಮನೆಯಲ್ಲಿ 15 ದಿನ ನಿನ್ನ ಜೊತೆ 15 ದಿನ ಇರ್ತಿನಿ ಎಂದಿದ್ದ ಎಂದು ಹೇಳಿಕೆ ನೀಡಿದ್ದಾರೆ.
ನನಗೆ ಎರಡು ಬಾರಿ ಅಬಾರ್ಟ್ ಆಗಿದೆ. ನನ್ನನ್ನ ಬಳಸಿಕೊಂಡ ಆತ, ನನಗೆ ಬೆದರಿಕೆ ಹಾಕಿದ್ದಾನೆ. ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಒಮ್ಮೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೆ. ಬರುಬರುತ್ತ ಈತನಿಗೆ ಬೇರೆ ಬೇರೆ ಹೆಣ್ಮಕ್ಕಳ ಸಹವಾಸ ಇರೋದು ಗೊತ್ತಾಗಿದೆ. ಇದನ್ನು ಪ್ರಶ್ನಿಸಿದಾಗಲೂ ಹಿಂಸೆ ನೀಡಿದ್ದಾನೆ. ಇತ್ತೀಚೆಗೆ ನಾನು ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿ ಬಂದಿದ್ದೆ. ಮಾರ್ಚ್ನಲ್ಲಿ ನನ್ನನ್ನು ನೋಡಲು ಬಂದು ಮತ್ತೆ ಬಳಸಿಕೊಳ್ಳಲು ಯತ್ನಿಸಿದ. ಅಲ್ಲದೇ, ನನ್ನ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ಗೆ ಯತ್ನಿಸಿದ ಎಂದು ಕಣ್ಣೀರಿಟ್ಟಿದ್ದಾರೆ