newsics.com
ನಾವೆಲ್ಲರೂ ಈ ಹಾವು ಹೆಸರು ಕೇಳಿದರೆ ಕೂಡಲೇ ಭಯ ಪಡುತ್ತೇವೆ. ಅಪ್ಪಿ ತಪ್ಪಿ ಈ ಹಾವು ಮನೆಯೊಳಗೆ ಬಂದು ಬಿಟ್ಟರೆ, ಅದು ಹೊರಗೆ ಹೋಗುವ ತನಕ ನಾವು ಮನೆಯೊಳಗೆ ಕಾಲಿಡಲ್ಲ.ಹಲವು ಬಾರಿ ಮನೆಯ ಮೂಲೆಯಲ್ಲಿ ಅಥವಾ ಬೆಚ್ಚಗೆಗಿರುವ ಸ್ಥಳಗಳಲ್ಲಿ ಅವಿತು ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಒಂದು ಹಾವು ಕಣ್ಣಿಗೆ ಬಿದ್ದ ಕೂಡಲೇ ಎದೆ ಹಿಡಿದು ಓಡಿ ಹೋಗುವವರೇ ಹೆಚ್ಚು. ಆದರೆ ಇಲ್ಲೊಬ್ಬ ಹಾವಿನ ಜೊತೆ ಹಾವನ್ನು ಸ್ಪರ್ಶಿಸಿ ಮತ್ತು ಮುದ್ದು ಮಾಡುತ್ತಿದ್ದಾನೆ.ನಿಜಕ್ಕೂ ಇದು ಮೈ ಜುಮ್ಮೆನ್ನುವ ದೃಶ್ಯವಿದು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದು ಭಾರತದಲ್ಲಿನ ಅತಿ ಉದ್ದದ ವಿಷಕಾರಿ ಹಾವು. ಇದರ ಕಡಿತವು ಮಾರಣಾಂತಿಕವಾಗಿರುವುದರಿಂದ, ಯಾರೂ ಹತ್ತಿರ ಹೋಗಲು ಪ್ರಯತ್ನಿಸುವುದಿಲ್ಲ. ಆದಾಗ್ಯೂ, ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಹಾವನ್ನು ಸ್ಪರ್ಶಿಸಿ ಮತ್ತು ಮುದ್ದು ಮಾಡುತ್ತಿದ್ದಾನೆ. ಈ ವಿಡಿಯೋವನ್ನು ‘ಎ ಕಿಂಗ್ ಕೋಬ್ರಾ ಅಪ್‌ಕ್ಲೋಸ್’ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಹಾವು ಇಷ್ಟು ಹತ್ತಿರ ಬರುತ್ತಿರುವುದನ್ನು ನೋಡಿ ಭಯವಾಯಿತು ಇದೇನು? ಇವರು ಈ ಹಾವನ್ನು ಹೇಗೆ ಮುದ್ದು ಮಾಡುತ್ತಿದ್ದಾರೆ,ನಾಗರಹಾವನ್ನು ಇಷ್ಟು ಹತ್ತಿರದಿಂದ ನಾನು ಇನ್ನು ನೋಡಲು ಸಾಧ್ಯವಿಲ್ಲ ಅನೇಕ ಜನರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.