newsics.com
ಇಲ್ಲೊಬ್ಬ ಯುವಕ ಕೆಲಸ ಮಾಡುತ್ತಿದ್ದ ಮನೆಯಿಂದಲೇ 10 ಲಕ್ಷ ರೂ. ಮೌಲ್ಯದ ಆಭರಣ ಕದ್ದು ವಧುವಿಗೆ ತೊಡಿಸಲು ಮುಂದಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನ ರಾಜ್ಯದ ಜೈಪುರದ ಗಾಂಧಿನಗರ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂದೀಪ್ ವರ್ಮಾ ಎಂದು ಹೇಳಲಾಗಿದೆ.
ಈತ ರಾಜಸ್ಥಾನ ವಿಶ್ವವಿದ್ಯಾಲಯದ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ವೃದ್ಧ ದಂಪತಿಗಳ ಆರೈಕೆಗಾಗಿ ಸಂದೀಪ್ ವರ್ಮಾ ನನ್ನು ನೇಮಿಸಲಾಗಿತ್ತು. ವೃದ್ಧ ದಂಪತಿಯ ಸೊಸೆ, ಸಂದೀಪ್‌ಗೆ ತಿಂಗಳಿಗೆ ₹15,000 ಸಂಬಳ ನೀಡುತ್ತಿದ್ದರು.ಆದರೆ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿಕೊಂಡು ಬಂಗಾರದ ಆಭರಣವನ್ನು ಕದ್ದಿದ್ದಾನೆ.
ಎಷ್ಟೇ ಹುಡುಕಿದರೂ ಆಭರಣದ ಸಿಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೇಲೆ ಅನುಮಾನ ಬಂದು ಅವರ ಮದುವೆ ಮಂಟಪಕ್ಕೆ ಹೋದಾಗ ಅಲ್ಲಿ ವಧುವಿಗೆ ಆಭರಣ ಕೊಟ್ಟು ಮದುವೆ ಮಾಡಿಕೊಳ್ಳುತ್ತಿದ್ದುದು ಕಂಡುಬಂದಿದೆ. ಕದ್ದ ಮಾಲ್‌ನ ಸಮೇತವಾಗಿ ಸಿಕ್ಕಿಬಿದ್ದ ಕಳ್ಳ ಯುವಕನನ್ನು ಮದುವೆ ಮಂಟಪದಲ್ಲಿಯೇ ಬಂಧಿಸಿ ಕರೆದೊಯ್ದಿದ್ದಾರೆ.