newsics.com
ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್‌ಬಿಆರ್ ಬಡಾವಣೆಯಲ್ಲಿ ನಡೆದಿದೆ.
ಕೆ.ಜಿ.ಹಳ್ಳಿ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಪತ್ನಿ ಶಾಲಿನಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಈ ಹಿಂದೆ ಶಾಲಿನಿಗೆ ಒಂದು ಮದುವೆಯಾಗಿತ್ತು. ಆದರೂ ಸಹ ಹೈಸ್ಕೂಲ್ ನಲ್ಲಿ ಟ್ಯೂಷನ್ ಮೆಟ್ಸ್ ಆಗಿದ್ದ ಪಿಎಸ್ಐನನ್ನು ಮದುವೆಯಾಗಲು ಶಾಲಿನಿ, ತನ್ನ ಮೊದಲ ಗಂಡನಿಗೆ ವಿಚ್ಛೇದನ ನೀಡಿದ್ದರು. ಬಳಿಕ ಪಿಎಸ್ಐನನ್ನು 2ನೇ ಮದುವೆಯಾಗಿದ್ದಳಿ. ಆದ್ರೆ, ಮೊದಲ ಗಂಡನನ್ನು ಬಿಟ್ಟು ಬಂದು ಹೈಸ್ಕೂಲ್ ಗೆಳೆಯನನ್ನ ಮದುವೆಯಾಗಿದ್ದಳು.
ಮೃತ ಶಾಲಿನಿ ಮತ್ತು ಪಿಎಸ್ಐ ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಹೈಸ್ಕೂಲ್‌ನಲ್ಲಿ ಟ್ಯೂಷನ್‌ಮೆಟ್ಸ್ ಆಗಿದ್ದರು. ನಂತರ ಶಾಲಿನಿ MSc ಹಾಗೂ ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ನಾಗರಾಜ್ ಬೆಂಗಳೂರಿನಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅದೇ ವೇಳೆ ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ನಾಗರಾಜ್‌ಗೆ ಪಿಎಸ್‌ಐ ಪರೀಕ್ಷೆ ತಯಾರಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಹೀಗೆ ಮುಂದುವರಿಯುತ್ತಾ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ನಾಗರಾಜ್ ಪರಿಚಯ ಆದಮೇಲೆ ಮೊದಲ ಪತಿಗೆ ಶಾಲಿನಿ ಡಿವೋರ್ಸ್ ನೀಡಿದ್ದರು. ಸದ್ಯ ಮೃತ ಶಾಲಿನಿಗೆ 7 ವರ್ಷದ ಮಗು ಇದೆ.
ಗಂಡ-ಹೆಂಡತಿ HBR ಲೇಔಟ್ ನಲ್ಲಿ ವಾಸವಾಗಿ ಚೆನ್ನಾಗಿ ಸಂಸಾರ ನಡೆಸ್ತಾ ಇದ್ರು. ಆದರೆ ಕಳೆದೆರಡು ತಿಂಗಳಿನಿಂದ ಶಾಲಿನಿ ನಾಗರಾಜ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಬೇಸತ್ತು ನಾಗರಾಜ್ ಬೇರೆಡೆ ವಾಸವಿದ್ದ. ಪತಿ ಮನೆಗೆ ಬರುತ್ತಿಲ್ಲವೆಂದು ಕೋಪಗೊಂಡ ಶಾಲಿನಿ ನಿನ್ನೆ ರಾತ್ರಿ ಕರೆ ಮಾಡಿ ರೈಲಿಗೆ ಸಿಕ್ಕಿ ಸಾಯುತ್ತೇನೆಂದು ಹೇಳಿ ಮನೆಯಿಂದ ಹೊರಟ್ಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ರು. ಹೊಯ್ಸಳ ಸಿಬ್ಬಂದಿ ಮನೆಗೆ ಬಿಟ್ಟು ತೆರಳುತ್ತಿದ್ದಂತೆ ಶಾಲಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಈ ಕುರಿತು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.