newsics.com
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕಳೆದುಕೊಳ್ತಿದ್ದಾರೆ. ಹಾರ್ಟ್ ಅಟ್ಯಾಕ್ ಅಂದರೆ ದೊಡ್ಡ ವಯಸ್ಸಿನವರ ಖಾಯಿಲೆ ಅನ್ನೋ ಒಂದು ಕಲ್ಪನೆಯಿಂದ, ಸಣ್ಣ ಸಣ್ಣವರ ಖಾಯಿಲೆಯೂ ಸಹ ಅನ್ನುವ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಈ ಆತಂಕದ ಬೆನ್ನಲ್ಲೇ ಆರೋಗ್ಯ ತಜ್ಞರು ಮತ್ತೊಂದು ಆಘಾತಕಾರಿ ವಿಷಯ ಒಂದನ್ನು ಹೊರಹಾಕಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ ಒಂದು ಅಧ್ಯಯನವನ್ನ ನಡೆಸಿತ್ತು. ಆ ಅಧ್ಯಯನದಲ್ಲಿ ಸುಮಾರು 2 ಲಕ್ಷ ಮಂದಿ ಗಂಡಸರಲ್ಲಿ ‘ಬ್ರೋಕೆನ್ ಹಾರ್ಟ್ ಸಿಂಡ್ರೋಮ್’ ಎಂಬ ಖಿನ್ನತೆ ಕಾಣಿಸಿದೆಯಂತೆ. ಈ ಸಿಂಡ್ರೋಮ್ನ ಲಕ್ಷಣಗಳು ಹಾರ್ಟ್ಗೆ ಸಂಬಂಧಿಸಿವೆ.ಈ ಸಿಂಡ್ರೋಮ್ನಿಂದ ಸಾಯುವ ಸಾಧ್ಯತೆಯನ್ನ ಮಹಿಳೆಯರಿಗೆ ಹೋಲಿಸಿದರೆ. ಅದಕ್ಕಿಂತ ಎರಡು ಪಟ್ಟು ಹೆಚ್ಚು ಪುರುಷರಿದ್ದಾರೆ ಎನ್ನಲಾಗ್ತಿದೆ.
ಒಂದು ಸಣ್ಣ ವಿಷಯಕ್ಕೂ ಬೇಸರ, ಕಣ್ಣೀರಿಗೆ ತುತ್ತಾಗುತ್ತಿದ್ದವರು ಮಹಿಳೆಯರೇ ಹೆಚ್ಚು ಅನ್ನೋ ಮಾತಿತ್ತು. ಈಗ ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರೇ ‘ಬ್ರೋಕೆನ್ ಹಾರ್ಟ್ ಸಿಂಡ್ರೋಮ್’ಗೆ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
ಟಕೋಟ್ಸುಬೊ ಕಾರ್ಡಿಯೊಮಯೋಪತಿ ಎಂಬುದು ತೀವ್ರವಾದ ಭಾವನಾತ್ಮಕ ಅಥವಾ ದೈಹಿಕ ಒತ್ತಡದಿಂದ ಪ್ರಚೋದಿಸಲ್ಪಡುವ ತಾತ್ಕಾಲಿಕ ಹೃದಯ ಸ್ಥಿತಿಯಾಗಿದ್ದು, ಇದು ಎದೆ ನೋವು ಮತ್ತು ಉಸಿರಾಟದ ತೊಂದರೆಯಂತಹ ಹೃದಯಾಘಾತವನ್ನು ಅನುಕರಿಸುವ ಲಕ್ಷಣಗಳಿಗೆ ಕಾರಣವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇದರ ಹಿಮ್ಮುಖತೆಯ ಹೊರತಾಗಿಯೂ, ಈ ಸ್ಥಿತಿಯು ರಕ್ತ ಕಟ್ಟಿ ಹೃದಯ ಸ್ಥಂಭನ, ಹೃದಯ ಆಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ತೀವ್ರ ತೊಡಕುಗಳಿಗೆ ಕಾರಣವಾಗಬಹುದು.
ದೈಹಿಕವಾಗಿ ಆಗಲೀ ಅಥವಾ ಮಾನಸಿಕವಾಗಿ ಆಗಲೀ, ತೀವ್ರ ಒತ್ತಡದಿಂದ ಉಂಟಾಗುವ ಈ ‘ಬ್ರೋಕೆನ್ ಹಾರ್ಟ್ ಸಿಂಡ್ರೋಮ್’ ಈಗ ಪುರುಷರಲ್ಲಿ 11.2% ಇದ್ದರೆ, ಮಹಿಳೆಯರಲ್ಲಿ 5.5% ರಷ್ಟು ಸಾವನ್ನು