newsics.com
ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದು ನಿಮಗೆಲ್ಲಾ ಗೊತ್ತಿರೋದೇ. ಚಿನ್ನದ ಧಾರಣೆ ರಾಕೇಟ್ ಸ್ಪೀಡ್‌ನಲ್ಲಿ ಮೇಲಕ್ಕೆ ಹಾರುತ್ತಿದೆ. ಮೇಲಕ್ಕೆ ಚಿಮ್ಮಿದ್ದು, ಒಂದಲ್ಲ ಒಂದು ದಿನ ನೆಲಕ್ಕೆ ಇಳಿಯಲೇ ಬೇಕು ಅನ್ನೋದು ನಿಸರ್ಗದ ನಿಯಮ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಸೋಮವಾರ 35 ರೂ ಏರಿಕೆ ಆಗಿದ್ದ ಚಿನ್ನದ ಬೆಲೆ ಮಂಗಳವಾರ 45 ರೂ ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 8,710 ರೂಗೆ ಇಳಿದರೆ, 24 ಕ್ಯಾರಟ್ ಚಿನ್ನದ ಬೆಲೆ 9,502 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಇತ್ಯಾದಿ ಕಡೆ 98 ರೂ ಇದ್ದದ್ದು 97 ರೂಗೆ ಇಳಿದಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,020 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,020 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ