Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Weekly prediction ಈ ವಾರದ ರಾಶಿ ಭವಿಷ್ಯ, ಮೇ 18-24, ನಿಮ್ಮ ಗ್ರಹಗತಿ ಹೇಗಿದೆ?
ಈ ದಿನಪಂಚಾಂಗಪ್ರಮುಖವಾರ ಭವಿಷ್ಯ

Weekly prediction ಈ ವಾರದ ರಾಶಿ ಭವಿಷ್ಯ, ಮೇ 18-24, ನಿಮ್ಮ ಗ್ರಹಗತಿ ಹೇಗಿದೆ?

Share
9 Min Read
SHARE

newsics.com
ವಾರ ರಾಶಿ ಭವಿಷ್ಯ
2025 ಮೇ 18 ರಿಂದ 24
—

ಮೇಷ
ಈ ವಾರವು ಪ್ರೇಮ ಸಂಬಂಧದಲ್ಲಿರುವವರಿಗೆ ಸಂತಸ ತರಲಿದ್ದು, ಅವರು ಹಳೆಯ ಸಂಗಾತಿಯೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಸಾಧ್ಯತೆ ಇದೆ. ಕೆಲವರು ಸಂಬಂಧಕ್ಕೆ ಕುರಿತಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಸಮನ್ವಯದೊಂದಿಗೆ ಮುಂದಕ್ಕೆ ಹೆಜ್ಜೆ ಇಡುವ ಸಾಧ್ಯತೆ ಇದೆ. ಆದರೆ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಇದನ್ನು ಬಗೆಹರಿಸುವುದಕ್ಕಾಗಿ ಹಿರಿಯರ ಜೊತೆಗೆ ಮಾತುಕತೆ ನಡೆಸುವ ಅಗತ್ಯ ಎದುರಾಗಬಹುದು. ಆರ್ಥಿಕವಾಗಿ ಈ ವಾರವು ಸಾಕಷ್ಟು ಸವಾಲುಗಳಿಂದ ಕೂಡಿರಲಿದೆ. ಹೀಗಾಗಿ ಸಾಲ ಪಡೆದುಕೊಳ್ಳಬೇಡಿ ಅಥವಾ ಸಾಲಕ್ಕೆ ಅರ್ಜಿ ಹಾಕಬೇಡಿ. ವ್ಯಾಪಾರೋದ್ಯಮಿಗಳು ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಅವರು ಸಂಭಾವ್ಯ ಗ್ರಾಹಕರನ್ನು ಭೇಟಿಯಾಗಲಿದ್ದು, ಇದು ಅವರ ವ್ಯವಹಾರವನ್ನು ವರ್ಧಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಸಹಾಯವಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಈ ವಾರವು ಉತ್ಪಾದಕ ಎನಿಸಲಿದೆ. ಜ್ಞಾನದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾ ಕಲಿಕೆಗಾಗಿ ಹಾತೊರೆಯಲಿದ್ದಾರೆ. ಆದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವಾರವು ದುರ್ಬಲ ಎನಿಸಲಿದೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಒತ್ತಡವು ನಿಮ್ಮ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡಬಹುದು. ಆರೋಗ್ಯವು ಇನ್ನಷ್ಟು ಹದಗೆಡದಂತೆ ನೋಡಿಕೊಳ್ಳಬೇಕಾದರೆ ಒತ್ತಡವನ್ನು ನಿಭಾಯಿಸಬೇಕಾದುದು ಅಗತ್ಯ.
—

ವೃಷಭ
ಈ ವಾರವು ಸಾಮಾನ್ಯ ವಾರವೆನಿಸಲಿದೆ. ಆದರೆ ಈ ವಾರವು ಒಂದಷ್ಟು ಸವಾಲುಗಳನ್ನುಂಟು ಮಾಡಲಿದೆ. ಪ್ರೇಮ ಸಂಬಂಧದಲ್ಲಿರುವವರು ತನ್ನ ಸಂಬಂಧಕ್ಕೆ ಆದ್ಯತೆ ನೀಡದಿದ್ದರೆ ನೋವನ್ನು ಅನುಭವಿಸಬಹುದು. ಅರ್ಥಪೂರ್ಣ ಸಂವಹನಕ್ಕೆ ಅವಕಾಶ ಒದಗಿಸಿಕೊಳ್ಳುವುದು ಒಳ್ಳೆಯದು. ವಿವಾಹಿತ ಜೋಡಿಗಳ ಪಾಲಿಗೆ, ಯಾವುದೇ ಸಮಸ್ಯೆಯನ್ನು ಬಗೆಹರಿಸಬೇಕಾದರೆ ನಿಮ್ಮ ಸಂಗಾತಿಯ ಮಾತುಗಳನ್ನು ಅರಿತುಕೊಂಡು ಪರಿಹಾರ ಕಂಡುಹಿಡಿಯುವುದು ಅಗತ್ಯ. ಇಲ್ಲದಿದ್ದರೆ ಮತ್ತೆ ಸಮಸ್ಯೆ ಉಲ್ಬಣಿಸಬಹುದು. ಆರ್ಥಿಕವಾಗಿ ಈ ವಾರವು ದುರ್ಬಲವೆನಿಸಲಿದೆ. ಮುಖ್ಯವಾಗಿ ಕಾನೂನಿನ ವಿಷಯಗಳಿಗೆ ಸಂಬಂಧಿಸಿದಂತೆ ಖರ್ಚುವೆಚ್ಚಗಳು ಹೆಚ್ಚುವ ಕಾರಣ ಈ ವಾರದಲ್ಲಿ ನೀವು ಹತಾಶೆಯನ್ನು ಅನುಭವಿಸಬಹುದು. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕುದಾದ ಫಲ ದೊರೆಯದ ಕಾರಣ ನಿರಾಸೆ ಉಂಟಾಗಬಹುದು. ಇದು ಗೊಂದಲಕ್ಕೆ ಕಾರಣವಾಗಿ ತಪ್ಪು ಆಯ್ಕೆಗಳನ್ನು ಮಾಡುವ ಸಾಧ್ಯತೆ ಇದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಜಂಜಾಟದ ಬದುಕಿನ ಕಾರಣ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಇದ್ದು, ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಆದಷ್ಟು ಬೇಗ ಬಗೆಹರಿಸುವುದು ಒಳ್ಳೆಯದು. ಏಕೆಂದರೆ ಇದರಿಂದಾಗಿ ಅನನುಕೂಲತೆ ಮತ್ತು ಒತ್ತಡ ಕಾಣಿಸಿಕೊಳ್ಳಬಹುದು.
—

ಮಿಥುನ
ಈ ವಾರವು ಭರವಸೆಯಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವವರು ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸಂವಹನ ಮಾಡುವುದು ಒಳ್ಳೆಯುದು. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಸಮಸ್ಯೆಯ ಕಾರಣ ಒಂದಷ್ಟು ಒತ್ತಡವನ್ನು ಅನುಭವಿಸಬಹುದು. ಇದು ಅವರ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು. ಧನಾತ್ಮಕ ವಿಚಾರದ ಕುರಿತು ಹೇಳುವುದಾದರೆ, ಹಣಕಾಸಿನ ವಿಚಾರದಲ್ಲಿ ಈ ವಾರವು ಸಂತಸವನ್ನು ತರಲಿದ್ದು, ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಆರ್ಥಿಕ ಪ್ರಗತಿಯನ್ನು ಸಾಧಿಸಲು ನೀವು ಗಮನ ನೀಡಲಿದ್ದೀರಿ. ಉದ್ಯೋಗದಲ್ಲಿರುವವರು ಉತ್ತಮ ಸಂಬಂಧವನ್ನು ಕಾಪಾಡಬೇಕಾದರೆ ತಮ್ಮ ಬಾಸ್‌ ಜೊತೆಗೆ ಸಂಘರ್ಷ ಉಂಟಾದಂತೆ ನೋಡಿಕೊಳ್ಳಬೇಕು. ಹಳೆಯ ಯೋಜನೆಗಳಿಗೆ ವೇಗ ದೊರೆಯುವುದರಿಂದ ವ್ಯಾಪಾರೋದ್ಯಮಿಗಳಿಗೆ ಲಾಭ ಉಂಟಾಗಲಿದ್ದು, ಪ್ರಗತಿ ಸಾಧಿಸಬಹುದು. ವಿದ್ಯಾರ್ಥಿಗಳು ಹೊಸ ಸಂಶೋಧನೆ ಅಥವಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಇದರಿಂದಾಗಿ ಅವರಿಗೆ ಉತ್ತೇಜನ ದೊರೆಯಲಿದೆ. ಆರೋಗ್ಯದ ಕುರಿತು ಹೇಳುವುದಾದರೆ, ದೀರ್ಘಕಾಲೀನ ಸಮಸ್ಯೆಗಳಿಂದ ಅವರಿಗೆ ಮುಕ್ತಿ ದೊರೆಯಲಿದೆ. ಆದರೆ ಹಣಕ್ಕೆ ಸಂಬಂಧಿಸಿದ ಚಿಂತೆ ಉಂಟಾಗಲಿದೆ. ಇನ್ನಷ್ಟು ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಈ ಕುರಿತು ಸಾಕಷ್ಟು ಕಾಳಜಿ ವಹಿಸಿ.
—

ಕರ್ಕಾಟಕ
ಈ ವಾರವು ಧನಾತ್ಮಕವಾಗಿ ಪ್ರಾರಂಭಗೊಳ್ಳಲಿದ್ದು, ಪ್ರೇಮ ಸಂಬಂಧದಲ್ಲಿರುವವರಿಗೆ ಸಂತಸವನ್ನು ಕರುಣಿಸಲಿದೆ. ನಿಮ್ಮ ಸಂಗಾತಿಯ ಜತೆಗೆ ನೀವು ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ ನಿಮ್ಮ ಬಂಧವನ್ನು ಬಲಪಡಿಸಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ವೈವಾಹಿಕ ಸಂಬಂಧದಲ್ಲಿರುವವರು ತಮ್ಮ ಸಂಬಂಧಕ್ಕೆ ಸಮಯವನ್ನು ಮೀಸಲಿಡುವುದರಿಂದ ದೀರ್ಘಕಾಲೀನ ವಿವಾದಗಳನ್ನು ಬಗೆಹರಿಸಬಹುದು. ಆರ್ಥಿಕವಾಗಿ ಹೇಳುವುದಾದರೆ ನೀವು ಜಾಣ್ಮೆಯಿಂದ ಹೂಡಿಕೆ ಮಾಡಲಿದ್ದೀರಿ. ಇದು ಪ್ರಯೋಜನಕಾರಿ ಎನಿಸಲಿದೆ. ಶೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಉತ್ತಮ ಲಾಭ ದೊರೆಯಲಿದೆ. ವೃತ್ತಿಗೆ ಸಂಬಂಧಿಸಿದಂತೆ ಈ ವಾರವು ಆಶಾದಾಯಕ ಎನಿಸಲಿದೆ. ಆದರೆ ನೀವು ಒಂದಷ್ಟು ಗೊಂದಲವನ್ನು ಎದುರಿಸಬಹುದು. ಆದರೂ ನೀವು ಮುಂದಕ್ಕೆ ಹೆಜ್ಜೆ ಇಡಲು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ಕೆಲಸಕ್ಕೆ ಸಂಬಂಧಿಸಿದ ಉದ್ದೇಶಕ್ಕಾಗಿ ನೀವು ಪ್ರಯಾಣಿಸಬೇಕಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಒತ್ತು ನೀಡುವುದು ಅಗತ್ಯ. ಹೀಗಾಗಿ ಈ ವಾರದಲ್ಲಿ ಗೆಳೆಯರಿಂದ ಅಂತರ ಕಾಪಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ದಿನಚರಿಯಲ್ಲಿ ಬದಲಾವಣೆಯನ್ನು ಮಾಡುವ ಇಚ್ಛೆ ನಿಮ್ಮಲ್ಲಿ ಉದ್ಭವಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಕಣ್ಣುಗಳ ಕುರಿತು ಕಾಳಜಿ ವಹಿಸಿ ಹಾಗೂ ಆಹಾರ ಕ್ರಮವನ್ನು ನಿರ್ಲಕ್ಷಿಸಬೇಡಿ.
—

ಸಿಂಹ
ಕೌಟುಂಬಿಕ ಬದುಕನ್ನು ಸಾಗಿಸುತ್ತಿರುವವರು ತಮ್ಮ ಸಂಗಾತಿಯಿಂದ ಶುಭ ಸುದ್ದಿಯನ್ನು ಪಡೆಯಲಿದ್ದು ಈ ವಾರವು ಅವರಿಗೆ ಸಂತಸವನ್ನು ತರಲಿದೆ. ಹಳೆಯ ಪ್ರೇಮಿಯೊಂದಿಗೆ ಮತ್ತೆ ಸಮಾಗಮಗೊಳ್ಳುವುದರಿಂದ ಹಳೆಯ ನೆನಪುಗಳು ಮತ್ತೆ ಮರುಕಳಿಸಲಿವೆ. ಆರ್ಥಿಕವಾಗಿ ಈ ವಾರ ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಹಣವನ್ನು ಸಾಲ ಪಡೆದರೆ ಮರಳಿ ಪಾವತಿಸುವಾಗ ಸವಾಲುಗಳು ಎದುರಾಗಬಹುದು. ಹೀಗಾಗಿ ಎಚ್ಚರ ವಹಿಸಬೇಕು. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿರುವವರು ಹೂಡಿಕೆ ಮಾಡುವ ಮೂಲಕ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ವ್ಯಾಪಾರೋದ್ಯಮಿಗಳಿಗೆ ಪ್ರಗತಿ ಉಂಟಾಗಲಿದೆ. ಅವರ ವ್ಯವಹಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದ್ದು ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಉದ್ಯೋಗದಲ್ಲಿರುವವರು ಬದಲಾವಣೆಯನ್ನು ಬಯಸುತ್ತಿದ್ದರೆ ಅವರು ಈಗಲೇ ಕಾರ್ಯಪ್ರವೃತ್ತರಾಗಬೇಕು. ಏಕೆಂದರೆ ಇದು ಅವರ ಪಾಲಿಗೆ ಸಕಾಲವಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು ಹಾಗೂ ಯಶಸ್ಸಿನ ಹಾದಿಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಳೆಯ ಸಮಸ್ಯೆಗಳು ಮರುಕಳಿಸಲಿದ್ದು ಸ್ವಲ್ಪ ಚಿಂತೆ ಕಾಣಿಸಿಕೊಳ್ಳಬಹುದು. ಹೀಗಾಗಿ ಆರೋಗ್ಯದ ಕುರಿತು ಗಮನ ನೀಡುವುದು ಅಗತ್ಯ. ನಿರಂತರವಾಗಿ ಯೋಗ ಮತ್ತು ವ್ಯಾಯಾಮ ಮಾಡಿದರೆ ನಿಮ್ಮ ಒತ್ತಡವನ್ನು ನಿಭಾಯಿಸಿ ಕ್ಷಮತೆಯನ್ನು ಕಾಪಾಡಬಹುದು.
—

ಕನ್ಯಾ
ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಒಂದಷ್ಟು ಒತ್ತಡ ಮತ್ತು ಗೊಂದಲ ಎದುರಾಗಬಹುದು. ಇದರಿಂದಾಗಿ ಅವರ ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ಕಷ್ಟವಾದೀತು. ಆದರೆ ವೈವಾಹಿಕ ಬದುಕಿನಲ್ಲಿ ಜೀವನ ಸಂಗಾತಿಗಳ ನಡುವಿನ ಅಂತರವು ಕಡಿಮೆಯಾಗಲಿದ್ದು, ಸಂಬಂಧದಲ್ಲಿ ಸಾಮರಸ್ಯ ಕಂಡುಬರಲಿದೆ. ಆರ್ಥಿಕವಾಗಿ ಹೇಳುವುದಾದರೆ ಖರ್ಚು ವೆಚ್ಚಗಳು ಹೆಚ್ಚಲಿವೆ. ಇದರಿಂದಾಗಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಆದರೆ ಆಸ್ತಿಯನ್ನು ಖರೀದಿಸುವ ನಿಮ್ಮ ಇಚ್ಛೆಯು ಈಡೇರಲಿದೆ. ವ್ಯಾಪಾರೋದ್ಯಮಿಗಳು ಸಾಕಷ್ಟು ಪರ್ಯಾಲೋಚನೆಯ ನಂತರವೇ ವ್ಯವಹಾರಗಳನ್ನು ಅಂತಿಮಗೊಳಿಸಬೇಕು. ಉದ್ಯೋಗದಲ್ಲಿರುವವರು ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಸಂದರ್ಶನಕ್ಕೆ ಕರೆ ಬರಬಹುದು. ಹೀಗೆ ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಈ ವಾರದಲ್ಲಿ ಪ್ರಗತಿ ಉಂಟಾಗಲಿದೆ. ಆದರೆ ಅವರು ಮುಖ್ಯವಾಗಿ ಏನಾದರೂ ಹೊಸತನ್ನು ಕಲಿಯುವಾಗ ಶಿಸ್ತನ್ನು ಪಾಲಿಸುವುದರ ಜತೆ ಏಕಾಗ್ರತೆಗೆ ಒತ್ತು ನೀಡಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಒತ್ತಡವು ಹೆಚ್ಚಾಗಬಹುದು. ಕೆಲವೊಂದು ದೀರ್ಘಕಾಲೀನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಸಕಾಲಿಕ ಕ್ರಮದ ಮೂಲಕ ನೀವು ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಲಿದ್ದೀರಿ.
—

ತುಲಾ
ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಆರ್ಥಿಕ ಯತ್ನದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು ಇದರಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿರುವವರ ಬದುಕಿನಲ್ಲಿ ಸಂತಸ ಹೆಚ್ಚಲಿದ್ದು, ಇವರ ಸಂಬಂಧವು ವೈವಾಹಿಕ ಬದುಕಿನತ್ತ ಸಾಗಲಿದೆ. ಆದರೆ ನೀವು ಮಕ್ಕಳಿಗೆ ಹೆಚ್ಚಿನ ಗಮನವನ್ನು ನೀಡದ ಕಾರಣ ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು ಅವರು ಬೇಸರಗೊಳ್ಳಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಪೂರ್ಣಗೊಳಿಸಬೇಕಾದರೆ ತಮ್ಮ ಸಹೋದ್ಯೋಗಿಗಳ ನೆರವನ್ನು ಪಡೆಯಬೇಕು. ಆದರೆ ಬಡ್ತಿಯ ಅವಕಾಶಗಳು ಲಭಿಸಬಹುದು. ವ್ಯಾಪಾರೋದ್ಯಮಿಗಳು ತಮ್ಮ ಯೋಜನೆಗಳ ಕುರಿತು ಕ್ರಮ ತೆಗೆದುಕೊಂಡು ಮುಂದಕ್ಕೆ ಹೆಜ್ಜೆ ಇಡುವ ಕಾರಣ ಲಾಭ ಉಂಟಾಗಲಿದ್ದು, ಉತ್ತಮ ಫಲಿತಾಂಶ ದೊರೆಯಲಿದೆ. ವಿದ್ಯಾರ್ಥಿಗಳು ಗೆಳೆಯರಿಂದಾಗಿ ಅಡಚಣೆ ಉಂಟಾಗದಂತೆ ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ನಿಮ್ಮ ಆಹಾರಕ್ರಮ ಅಥವಾ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಲು ಇಚ್ಛಿಸುವುದಾದರೆ ಮಾರ್ಗದರ್ಶನಕ್ಕಾಗಿ ಹಿರಿಯರನ್ನು ಸಮಾಲೋಚಿಸಿ. ಉತ್ತಮ ಆರೋಗ್ಯವನ್ನು ಕಾಪಾಡುವುದಕ್ಕಾಗಿ ನಿಮ್ಮ ಸಕ್ಕರೆ ಅಂಶ ಮತ್ತು ರಕ್ತದೊತ್ತಡವನ್ನು ನಿರಂತರವಾಗಿ ಪರಿಶೀಲಿಸುತ್ತಲೇ ಇರಿ.
—

ವೃಶ್ಚಿಕ
ಮುಖ್ಯವಾಗಿ ವೃತ್ತಿಯ ವಿಚಾರದಲ್ಲಿ ಈ ವಾರ ನಿಮಗೆ ಸಾಧಾರಣವಾಗಿ ಫಲದಾಯಕವಾಗಿದೆ. ಏನಾದರೂ ಹೊಸತನ್ನು ಕಲಿಯಲು ನಿಮಗೆ ಅವಕಾಶ ಲಭಿಸಲಿದೆ. ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ನೀವು ಯೋಚಿಸಬಹುದು. ಪ್ರೇಮ ಸಂಬಂಧದಲ್ಲಿರುವವರು ಪ್ರಯಾಣದಂತಹ ಚಟುವಟಿಕೆಗಳ ಮೂಲಕ ತಮ್ಮ ಸಂಗಾತಿಯ ಜತೆಗೆ ಸಮಯವನ್ನು ಚೆನ್ನಾಗಿ ಕಳೆಯಲು ಯೋಚಿಸಲಿದ್ದಾರೆ. ಅಲ್ಲದೆ ಈ ರಾಶಿಯವರಿಗೆ ಅವರ ವೃತ್ತಿ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದ್ದು, ಇದು ಅವರ ಸಂತಸಕ್ಕೆ ಕಾರಣವಾಗಲಿದೆ. ಕುಟುಂಬದ ಹಿರಿಯರ ನೆರವಿನಿಂದ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಬಹುದು. ಹೀಗಾಗಿ ಕೌಟುಂಬಿಕ ಬದುಕು ಸುಗಮವಾಗಿ ಮುಂದುವರಿಯಲಿದೆ. ಆರ್ಥಿಕವಾಗಿ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಹಣವನ್ನು ಸಾಲ ಪಡೆಯಲು ನೀವು ಇಚ್ಛಿಸುವುದಾದರೆ ಸುಲಭವಾಗಿ ನಿಮಗೆ ಸಾಲ ದೊರೆಯಲಿದೆ. ಆದರೆ ಸಾಕಷ್ಟು ಮೊತ್ತವನ್ನು ಉಳಿತಾಯ ಮಾಡಲು ನೀವು ಯತ್ನಿಸಲಿದ್ದೀರಿ. ಆದರೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿರಮಿಸಬೇಡಿ. ನಿರ್ಲಕ್ಷಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಯಾವುದೇ ಸಂಕೀರ್ಣತೆ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ನಿಮ್ಮ ಆರೋಗ್ಯದ ಮೇಲೆ ಗಮನ ಇರಿಸಿ.
—

ಧನುಸ್ಸು
ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಅವರು ಅಧ್ಯಯನಕ್ಕೆ ಒತ್ತು ನೀಡಿ ವಿದ್ಯಾಭ್ಯಾಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಆದರೆ ಪ್ರೇಮ ಸಂಬಂಧದಲ್ಲಿನ ಒತ್ತಡವು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಗಾತಿಗೆ ಸಂಬಂಧಿಸಿದಂತೆ ಮನೆಯಲ್ಲಿ ಒತ್ತಡವಿದ್ದಲ್ಲಿ ಅದು ಇನ್ನಷ್ಟು ಉಲ್ಬಣಿಸದಂತೆ ನೋಡಿಕೊಳ್ಳುವುದಕ್ಕಾಗಿ ಅದನ್ನು ಬಗೆಹರಿಸುವುದು ಒಳ್ಳೆಯದು. ಆರ್ಥಿಕವಾಗಿ ಈ ವಾರವು ಸಂತಸ ತರಲಿದೆ. ಹೊಸ ಮನೆ, ವಾಹನ ಅಥವಾ ಇಂತಹ ಬೇರೆ ಯಾವುದೇ ವಸ್ತುವನ್ನು ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ. ವ್ಯಾಪಾರೋದ್ಯಮಿಗಳ ಬಾಕಿ ಉಳಿದಿರುವ ಯೋಜನೆಗಳು ಅಥವಾ ಕಾಮಗಾರಿಗಳು ಈ ವಾರದಲ್ಲಿ ಪ್ರಾರಂಭವಾಗುವುದರಿಂದ ಬಾಕಿ ಉಳಿದಿರುವ ಕಾಮಗಾರಿಯು ಪೂರ್ಣಗೊಳ್ಳಲಿದೆ. ಉದ್ಯೋಗದಲ್ಲಿರುವವರು ತಮ್ಮ ಬಾಸ್‌ ಜತೆ ಸಾಮರಸ್ಯ ಕಾಪಾಡಿಕೊಳ್ಳಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು. ನಿಮ್ಮ ಕೊಲೆಸ್ಟರಾಲ್‌ ಮತ್ತು ಇತರ ಆರೋಗ್ಯ ಸೂಚಕಗಳನ್ನು ಆಗಾಗ ಪರೀಕ್ಷಿಸಿ. ಸಂತುಲನ ಸಾಧಿಸಿ ಆರೋಗ್ಯದಾಯಕ ಜೀವನವನ್ನು ಸಾಗಿಸುವುದಕ್ಕಾಗಿ ಯೋಗ ಮತ್ತು ಪ್ರಾಣಾಯಾಮವನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿರಿ.
—

ಮಕರ
ಆರೋಗ್ಯದ ವಿಚಾರದಲ್ಲಿ ಈ ವಾರವು ಸ್ವಲ್ಪ ಒತ್ತಡವನ್ನುಂಟು ಮಾಡಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮಗೆ ದೌರ್ಬಲ್ಯವು ಕಾಡಬಹುದು. ಹೀಗಾಗಿ ನಿಮ್ಮ ದೈಹಿಕ ಕ್ಷಮತೆಗೆ ಒತ್ತು ನೀಡುವುದು ಅಗತ್ಯ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಹಳೆಯ ಸಂಗಾತಿಯ ಜೊತೆಗೆ ಮತ್ತೆ ಸಂಪರ್ಕ ಸಾಧಿಸಬಹುದು. ಆದರೆ ದೀರ್ಘಕಾಲೀನ ಸಂತಸಕ್ಕಾಗಿ ನಿಮ್ಮ ಸಂಬಂಧಕ್ಕೆ ಒತ್ತು ನೀಡುವುದು ಒಳ್ಳೆಯದು. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಮಕ್ಕಳು ಕುಟುಂಬಕ್ಕೆ ಹೆಮ್ಮೆ ತರಲಿದ್ದಾರೆ. ಆರ್ಥಿಕವಾಗಿ ಈ ವಾರವು ಅನುಕೂಲಕರವಾಗಿರಲಿದೆ. ನಿಮ್ಮ ಇಚ್ಛೆಯನ್ನು ನೀವು ಸುಲಭವಾಗಿ ಈಡೇರಿಸಲಿದ್ದು ಸುಗಮವಾಗಿ ಕೌಟುಂಬಿಕ ನಿರ್ವಹಣೆಯನ್ನು ನಿಭಾಯಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಹೊಸ ಪಾಲುದಾರರನ್ನು ಸೇರಿಸಿಕೊಳ್ಳಬಾರದು. ಏಕೆಂದರೆ ತೆಗೆದುಕೊಳ್ಳುವ ನಿರ್ಧಾರದ ಕುರಿತು ಗೊಂದಲ ಮೂಡಬಹುದು. ಉದ್ಯೋಗದಲ್ಲಿರುವವರು ಅವಸರದಲ್ಲಿ ಬದ್ಧತೆಯನ್ನು ತೋರಬಾರದು. ಅಥವಾ ಖಚಿತತೆ ಇಲ್ಲದೆ ಯಾವುದೇ ಕೆಲಸಕ್ಕೆ ಹೌದೆನ್ನಬಾರದು. ವಿದ್ಯಾರ್ಥಿಗಳಿಗೆ ಅಡಚಣೆಯ ಕಾರಣ ಅಧ್ಯಯನಕ್ಕೆ ಒತ್ತು ನೀಡುವುದು ಕಷ್ಟಕರವೆನಿಸಬಹುದು. ಇದು ಅವರ ಶೈಕ್ಷಣಿಕ ಸಾಧನೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಅಧ್ಯಯನಕ್ಕೆ ಒತ್ತು ನೀಡುವುದು ಒಳ್ಳೆಯದು.
—

ಕುಂಭ
ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ದುರ್ಬಲವೆನಿಸಲಿದೆ. ಹೀಗಾಗಿ ನಿಮ್ಮ ಆಹಾರದ ಕುರಿತು ಕಾಳಜಿ ವಹಿಸಿ. ಏಕೆಂದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಆತ್ಮವಿಶ್ವಾಸದ ಕೊರತೆಯ ಕಾರಣ ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ಇದು ಬದುಕಿನ ಇತರ ಕ್ಷೇತ್ರಗಳ ಮೇಲೆ ಪ್ರಭಾವ ಬೀರಬಹುದು. ಆದರೆ ಕೌಟುಂಬಿಕ ಬದುಕು ಸಾಗಿಸುವವರು ಮುಕ್ತ ಸಂವಹನದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲಿದ್ದು, ಪರಸ್ಪರ ಅನ್ಯೋನ್ಯತೆ ಬೆಳೆಸಿಕೊಳ್ಳಲಿದ್ದಾರೆ. ಆರ್ಥಿಕವಾಗಿ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ.ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದರ ಜತೆ ಅಪಾಯದಿಂದ ಕೂಡಿದ ಹೂಡಿಕೆಯನ್ನು ಮಾಡದಿರುವುದು ಒಳ್ಳೆಯದು. ಉದ್ಯೋಗದಲ್ಲಿರುವವರು ಬಡ್ತಿಯ ಕಾರಣ ಹೊಸ ಸ್ಥಳಕ್ಕೆ ಹೋಗಬೇಕಾದೀತು. ಇದರಿಂದಾಗಿ ಹೊಸ ಅವಕಾಶಗಳು ಲಭಿಸಲಿವೆ. ವ್ಯಾಪಾರೋದ್ಯಮಿಗಳು ಯಶಸ್ವಿಯಾಗಿ ಮುಂದಕ್ಕೆ ಸಾಗಬೇಕಾದರೆ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನ ನೀಡಬೇಕು ಹಾಗೂ ಕಠಿಣ ಶ್ರಮ ವಹಿಸಬೇಕು. ಯಾವುದೇ ಆಲಸ್ಯವು ಶೈಕ್ಷಣಿಕ ಹಿನ್ನಡೆಗೆ ಕಾರಣವೆನಿಸಬಹುದು. ಗೆಳೆಯರಿಂದ ದೂರವಿದ್ದು ಏಕಾಗ್ರತೆಯನ್ನು ಸಾಧಿಸುವುದು ಒಳ್ಳೆಯದು.
—

ಮೀನ
ಈ ವಾರವು ನಿಮ್ಮ ಪಾಲಿಗೆ ಸಾಮಾನ್ಯ ವಾರ ಎನಿಸಲಿದೆ. ಕೌಟುಂಬಿಕ ಬದುಕಿನಲ್ಲಿ ಸಂಘರ್ಷ ಎದುರಾಗಬಹುದು. ಆದರೆ ಪರಸ್ಪರ ತಿಳಿವಳಿಕೆಯ ಮೂಲಕ ಅವುಗಳನ್ನು ಬಗೆಹರಿಸಬಹುದು. ಆದರೆ ಇವುಗಳನ್ನು ಬಗೆಹರಿಸದಿದ್ದರೆ ಇವು ಇನ್ನಷ್ಟು ಉಲ್ಬಣಗೊಳ್ಳಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅವರ ಪ್ರಣಯ ಸಂಗಾತಿಯೊಂದಿಗೆ ಪ್ರಣಯ ಮತ್ತು ಧನಾತ್ಮಕ ಭಾವನಾತ್ಮಕ ಸಂಪರ್ಕವನ್ನು ಕರುಣಿಸಲಿದೆ. ಇದರಿಂದಾಗಿ ಒಂದಷ್ಟು ವೆಚ್ಚಗಳು ಉಂಟಾಗಲಿದ್ದು ನಿಮ್ಮ ಉಳಿತಾಯದ ಮೇಲೆ ಪರಿಣಾಮ ಕಾಣಿಸಿಕೊಳ್ಳಲಿದೆ. ನೀವು ಆಸ್ತಿಯನ್ನು ಖರೀದಿಸಲು ಇಚ್ಛಿಸುವುದಾದರೆ, ಇದು ದುಬಾರಿ ಎನಿಸಬಹುದು. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಧನಾತ್ಮಕ ವಾರವೆನಿಸಲಿದ್ದು, ಅವರ ವ್ಯವಹಾರದಲ್ಲಿ ವಿಸ್ತರಣೆ ಉಂಟಾಗಲಿದೆ. ಬಾಕಿ ಉಳಿದಿರುವ ಕಾಮಗಾರಿಗಳು ಮತ್ತೆ ಹಳಿ ಏರಲಿವೆ. ಉದ್ಯೋಗದಲ್ಲಿರುವವರಿಗೆ ಸವಾಲುಗಳು ಎದುರಾಗಬಹುದು. ಆದರೆ ಸರ್ಕಾರಿ ಉದ್ಯೋಗಗಳಿಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಇದು ಸಕಾಲ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮಕ್ಕೆ ಒತ್ತು ನೀಡಬೇಕು. ಆರೋಗ್ಯದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿರಲಿದೆ. ಆದರೆ ಕುಟುಂಬದ ಸದಸ್ಯರೊಬ್ಬರ ಆರೋಗ್ಯದಲ್ಲಿ ಕುಸಿತ ಕಂಡುಬರಲಿದ್ದು ಅವರ ಕುರಿತು ಕಾಳಜಿ ವಹಿಸಿ.

TAGGED:#almanac #zodiac #prediction #weekly #18-05-2025 #sunday #horoscope #planetary #positions #newsics #ಭವಿಷ್ಯ #ನ್ಯೂಸಿಕ್ಸ್
Share This Article
Facebook Twitter Copy Link Print
Previous Article Ghost Flight: ಪೈಲಟ್ ಇಲ್ಲದೆ ಬರೋಬ್ಬರಿ 10 ನಿಮಿಷಗಳ ಕಾಲ ಹಾರಾಡಿದ ವಿಮಾನ
Next Article Gold Rate Today: ಚಿನ್ನದ ಬೆಲೆಯಲ್ಲಿ ಇಳಿಕೆ – ಹೀಗಿದೆ ಇಂದಿನ ಬಂಗಾರ-ಬೆಳ್ಳಿ ದರ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?