newsics.com
ಶ್ರೀಹರಿಕೋಟ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ(SDSC) ಮೊದಲ ಉಡಾವಣಾ ಪ್ಯಾಡ್‌ನಿಂದ EOS-09 ಭೂ ವೀಕ್ಷಣಾ ಉಪಗ್ರಹವನ್ನು ಸೂರ್ಯ-ಸಿಂಕ್ರೊನಸ್ ಧ್ರುವ ಕಕ್ಷೆಗೆ ನಿಯೋಜಿಸುವ ಗುರಿಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) PSLV-C61 ಉಡಾವಣೆ ಭಾನುವಾರ ವಿಫಲವಾಗಿದೆ.
ಇಂದು ಬೆಳಗ್ಗೆ 5.59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ61 ಮೂಲಕ EOS-09 ಉಪಗ್ರಹ ಉಡಾವಣೆಯನ್ನು ಪ್ರಯತ್ನಿಸಲಾಯಿತು. ಆದರೆ ಪಿಎಸ್‌ಎಲ್‌ವಿ-ಸಿ61 ಕಾರ್ಯಕ್ಷಮತೆ 2ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3ನೇ ಹಂತದಲ್ಲಿ ವೀಕ್ಷಣೆಯಿಂದಾಗಿ ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಪಿಎಸ್‌ಎಲ್‌ವಿ-ಸಿ61 ಮೂಲಕ ಭೂ ವೀಕ್ಷಣಾ EOS-09 ಉಪಗ್ರಹ ಉಡಾವಣೆ ಮಾಡುವ ಪ್ರಯತ್ನ ಫಲ ಕೊಡಲಿಲ್ಲ ಎಂದು ಹೇಳಲಾಗಿದೆ.
ಈ ಉಪಗ್ರಹವು ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಅನ್ನು ಹೊಂದಿದ್ದು, 1696.24 ಕೆಜಿ. ತೂಕವಿದೆ. ಇದರ ಜೀವಿತಾವಧಿ ಐದು ವರ್ಷಗಳಾಗಿದ್ದು, ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ನಿಂದ (SAR) ಸಜ್ಜುಗೊಂಡಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು-ರಾತ್ರಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳ ಸೆರೆಹಿಡಿಯಲು ಅನುವು ಮಾಡಿಕೊಡಲಿದೆ.