newsics.com
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್.ಪುರ ಕಡೆಯಿಂದ ಮೇಖಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸ್ತುವೆಗೆ ಹೆಚ್ಚುವರಿ ಕ್ಯಾಂಪ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಬ್ಬಾಳ ಫ್ಲೈ ಓವರ್ ನಲ್ಲಿ ಇಂದಿನಿಂದ 5 ದಿನ ವಾಹನ ಸಂಚಾರ ನಿಷೇಧಿಸಲಾಗಿದೆ.
ಹಳಿಗಳ ಮೇಲೆ 33.5 ಮೀಟರ್ ಉದ್ದದ 7 ಉಕ್ಕಿನ ಗರ್ಡರ್‌ಗಳನ್ನು ಅಳವಡಿಸಲಾಗುತ್ತದೆ. ಪ್ರತಿನಿತ್ಯ 3 ತಾಸುಗಳ ಕಾಲ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3ರವರೆಗೆ ಈ ಕಾಮಗಾರಿ ನಡೆಯಲಿದೆ. ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ಸಮಯದಲ್ಲಿ ಹೆಬ್ಬಾಳ ಮೇಲ್ಸೇತುವೆಯಲ್ಲಿಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ, ಮೂಲಕ ಮೇಖಿ ವೃತ್ತವನ್ನು ತಲುಪಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.