newsics.com
ಗದಗ: ಯುವಕನ ಹಿಂದೆ ಬಿದ್ದು ಮೂರು ಮಕ್ಕಳ ತಾಯಿ ಹೆಣವಾಗಿರುವ ಘಟನೆ ಗದಗನ ಸೂರಣಗಿ ಗ್ರಾಮದ ಬಳಿ ನಡೆದಿದೆ.
ಏಪ್ರಿಲ್ 23ರಂದು ಲಕ್ಷ್ಮೀ ಇಂಗಳಗಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು, ಮೊಬೈಲ್ ಕರೆಗಳ ಹಿಸ್ಟರಿ ಜಾಲಾಡಿದಾಗ ಕೊಲೆಯ ಹಿಂದೆ ಪ್ರೇಮ ಕಥೆಯ ವಾಸನೆ ಬಂದಿದೆ. ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ತಂಡ ಚಾಣಾಕ್ಷಣದಿಂದ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಯುವಕನೊಂದಿಗೆ ಮಹಿಳೆ ಲವ್ವಿಡವ್ವಿ ಹಾಗೂ ಕೊಲೆ ಕಹಾನಿ ಬಯಲಿಗೆ ಬಂದಿದೆ.
ಇನ್ನೂ ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದಾರೆ. ಆದ್ರೆ ಗಂಡನಿಂದ ಲಕ್ಷ್ಮೀ ದೂರವಾಗಿದ್ದಳು ಬದುಕು ಸಾಗಿಸಲು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆ ವೇಳೆಯಲ್ಲಿ ಹಾವೇರಿ ಜಿಲ್ಲೆಯ ಸುನಿಲ್ ಎನ್ನುವ ಯುವಕ ಪರಿಚಯವಾಗಿದ್ದು, ಇಬ್ಬರು ನಡುವೆ ಲವ್ ಆಗಿದೆ. ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಬೆಳೆದಿತ್ತು. ಆದ್ರೆ 30 ವರ್ಷದ ಸುನೀಲ್ ಮದುವೆ ಮಾಡಲು ಅವರ ಕುಟುಂಬಸ್ಥರು ತಯಾರಿ ನಡೆಸಿದ್ದರು. ಅದೇ ವೇಳೆ ಲಕ್ಷ್ಮೀ 5 ಲಕ್ಷ ಹಣ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇಲ್ಲವಾದರೆ ನಮ್ಮ ಅನೈತಿಕ ಸಂಬಂಧ ವಿಷಯ ಬಹಿರಂಗ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭ ಮಾಡಿದ್ದಾಳೆ.
ಲಕ್ಷ್ಮೀಯ ಬ್ಲ್ಯಾಕ್ಮೇಲ್ನಿಂದ ಕಂಗಾಲಾದ ಯುವಕ, ಸುನೀಲ್ ಗೆಳೆಯರಾದ ಸಿದ್ದಪ್ಪ, ನಟರಾಜ್, ರಮೇಶ ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಏಪ್ರಿಲ್ 22 ರಂದು ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮೃತ ದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾಗಿದ್ದರು. ಸದ್ಯ ಪೊಲೀಸರು ಚಾಣಾಕ್ಷಣದಿಂದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಎಡೆಮುರಿಕಟ್ಟಿದ್ದಾರೆ. ಇನ್ನು ಕಾರು, ಮೊಬೈಲ್, ಕತ್ತು ಹಿಸುಕಲು ಬಳಸಿದ್ದ ಕೇಬಲ್ ವೈರ್ ಅನ್ನು ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
13 ವರ್ಷದ ಬಾಲಕ ನಿಂದ ಗರ್ಭಿಣಿಯಾದ ಶಿಕ್ಷಕಿಯ ಗರ್ಭಪಾತಕ್ಕೆ ಕೋರ್ಟ್ ಒಪ್ಪಿಗೆ