Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 13 ವರ್ಷದ ಬಾಲಕ ನಿಂದ ಗರ್ಭಿಣಿಯಾದ ಶಿಕ್ಷಕಿಯ ಗರ್ಭಪಾತಕ್ಕೆ ಕೋರ್ಟ್ ಒಪ್ಪಿಗೆ
ದೇಶಪ್ರಮುಖ

13 ವರ್ಷದ ಬಾಲಕ ನಿಂದ ಗರ್ಭಿಣಿಯಾದ ಶಿಕ್ಷಕಿಯ ಗರ್ಭಪಾತಕ್ಕೆ ಕೋರ್ಟ್ ಒಪ್ಪಿಗೆ

Share
2 Min Read
SHARE

newsics.com

ಗುಜರಾತ್ : 13 ವರ್ಷದ ವಿದ್ಯಾರ್ಥಿಯಿಂದ ಗರ್ಭಿಣಿಯಾದ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್‌ನ ಸೂರತ್‌ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ.

ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಕೇಸ್‌ನಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಸದ್ಯ ಸೂರತ್‌ನ ಜೈಲಿನಲ್ಲಿದ್ದಾಳೆ.

ಶಿಕ್ಷಕಿಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಬಾಲಕ ನಾಪತ್ತೆಯಾದ ಬಳಿಕ ಈ ಬಗ್ಗೆ ಆತನ ತಂದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸೂರತ್ ನಗರದ ಪುಣೆ ಠಾಣೆಯ ಪೊಲೀಸರು ಇವರನ್ನು ದೂರು ದಾಖಲಾದ 6 ದಿನಗಳ ಬಳಿಕ ಗುಜರಾತ್‌-ರಾಜಸ್ಥಾನ ಗಡಿಯಲ್ಲಿ ಪತ್ತೆ ಹಚ್ಚಿದ್ದರು.

ಏನಿದು ಪ್ರಕರಣ?

ಗುಜರಾತಿನ ಸೂರತ್ನಲ್ಲಿರುವ ಖಾಸಗಿ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಈಕೆ ಪಾಠ ಹೇಳಿಕೊಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಈ ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಸಾಕಷ್ಟು ಆತ್ಮೀಯತೆ ಬೆಳೆಸಿದ್ದಳು. ಕಾಲಾನಂತರದಲ್ಲಿ ಇಬ್ಬರು ಸಾಕಷ್ಟು ಆತ್ಮೀಯತೆ ಬೆಳೆಸಿಕೊಂಡಿದ್ದರು. ಆದರೆ ಕಳೆದ ಏಪ್ರಿಲ್ 25ರ ಮಧ್ಯಾಹ್ನ ವಿದ್ಯಾರ್ಥಿ ಕಾಣೆಯಾಗಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಶಿಕ್ಷಕಿ ಬಾಲಕನೊಂದಿಗೆ ಬ್ಯಾಗುಗಳನ್ನು ಹೊತ್ತೊಯ್ಯುತ್ತಿರುವುದು ಪತ್ತೆಯಾಗಿದೆ. ಇದರಿಂದ ಇದು ಪೂರ್ವ ನಿಯೋಜಿತ ಕೃತ್ಯವೆಂಬುದು ಬಯಲಾಗಿದೆ.

ವಿದ್ಯಾರ್ಥಿ ಕಾಣೆಯಾದ ಕುರಿತು ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು. ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದರು. ನಾಲ್ಕು ದಿನಗಳ ಹುಡುಕಾಟದ ನಂತರ ಇಬ್ಬರು ಗುಜರಾತ್-ರಾಜಸ್ಥಾನ ಗಡಿಯ ಬಳಿ ಪತ್ತೆಯಾಗಿದ್ದು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ವಡೋದರಾ, ಅಹಮದಾಬಾದ್, ದೆಹಲಿ, ಜೈಪುರ ಮತ್ತು ವೃಂದಾವನ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರಯಾಣಿಸಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದ್ದು. ಶಿಕ್ಷಕಿಯ ಮತ್ತು ಬಾಲಕನ ನಡುವೆ ವಡೋದರದ ಹೋಟೆಲ್ ಮತ್ತು ಮನೆಯಲ್ಲಿ ಲೈಂಗಿಕ ಸಂಪರ್ಕ ಏರ್ಪಟ್ಟಿರುವುದು ಬಹಿರಂಗವಾಗಿದೆ.

ಇನ್ನು ಶಿಕ್ಷಕಿ 5 ತಿಂಗಳ ಗರ್ಭಿಣಿ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಬಹಿರಂಗವಾಗಿದ್ದು. ಈ ಕುರಿತು ಸೂರತ್ ಪೊಲೀಸ್ ಉಪ ಆಯುಕ್ತ ಭಾಗೀರಥ್ ಗಧ್ವಿ ಖಾಸಗಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಅಪ್ರಾಪ್ತ ವಯಸ್ಕ ಮಗುವಿನ ತಂದೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ, ನಾವು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಇಬ್ಬರೂ ವ್ಯಕ್ತಿಗಳು ಹಲವಾರು ತಿಂಗಳುಗಳಿಂದ ದೈಹಿಕ ಸಂಬಂಧದಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.

https://x.com/Kshatriyadilip/status/1922667900403429613?ref_src=twsrc%5Etfw%7Ctwcamp%5Etweetembed%7Ctwterm%5E1922667900403429613%7Ctwgr%5Ed0f4733693161d9da1a3b7e4ae8ad53f4dd74a7b%7Ctwcon%5Es1_c10&ref_url=https%3A%2F%2Fm.test.in%2F

CIGARETTE DISPUTE LEADS TO MURDER ಸಿಗರೇಟ್‌ ತಂದು ಕೊಡದಿದ್ದಕ್ಕೆ ಕಾರು ಹರಿಸಿ ಟೆಕ್ಕಿ ಕೊಲೆ

TAGGED:Court approves abortion of teacher who became pregnant by 13-year-old boy
Share This Article
Facebook Twitter Copy Link Print
Previous Article CIGARETTE DISPUTE LEADS TO MURDER ಸಿಗರೇಟ್‌ ತಂದು ಕೊಡದಿದ್ದಕ್ಕೆ ಕಾರು ಹರಿಸಿ ಟೆಕ್ಕಿ ಕೊಲೆ
Next Article Black mail ಯುವಕನ ಹಿಂದೆ ಬಿದ್ದು ಹೆಣವಾದ ಮೂರು ಮಕ್ಕಳ ತಾಯಿ: ನಡೆದಿದ್ದೇನು?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?