Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Endless war ಮುಗಿಯದ ವಾಕ್ಸಮರ, ಚೈತ್ರಾ ಕಳ್ಳಿ ಎಂದ ತಂದೆ,‌ ಎಲ್ಲವೂ ಆಸ್ತಿಗಾಗಿ ಆರೋಪ ಎಂದ ಚೈತ್ರಾ ತಾಯಿ
ಕರ್ನಾಟಕಪ್ರಮುಖಮನರಂಜನೆ

Endless war ಮುಗಿಯದ ವಾಕ್ಸಮರ, ಚೈತ್ರಾ ಕಳ್ಳಿ ಎಂದ ತಂದೆ,‌ ಎಲ್ಲವೂ ಆಸ್ತಿಗಾಗಿ ಆರೋಪ ಎಂದ ಚೈತ್ರಾ ತಾಯಿ

Share
3 Min Read
SHARE

newsics.com

ಮಗಳು ಚೈತ್ರಾ ಕುಂದಾಪುರ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಮಾಧ್ಯಮದ ಮುಂದೆ ತಂದೆ ಬಾಲಕೃಷ್ಣ ನಾಯ್ಕ್ ಕಿಡಿಕಾರಿದ್ದರು. ತಂದೆಯ ಆರೋಪಕ್ಕೆಲ್ಲಾ ಚೈತ್ರಾ ತಿರುಗೇಟು ನೀಡಿದ್ದಾರೆ. ಇವರಿಬ್ಬರ ಚರ್ಚೆ ಮಾಧ್ಯಮದ ಮೂಲಕವೇ ಮುಂದುವರಿದಿರುವುದು ವಿಪರ್ಯಾಸ.

ಆಕೆ ನನ್ನನ್ನು ಮದುವೆಗೆ ಕರೆದಿಲ್ಲ. ನಾನು ಮದುವೆಗೆ ಹೋಗಿಲ್ಲ. ಹೀಗಾಗಿ ಈ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ ಎಂದು ಹೇಳಿದ್ದರು.

ತಂದೆಯ ಮಾತು ಕೇಳುತ್ತಿದ್ದಂತೆ ಚೈತ್ರಾ ಕುಂದಾಪುರ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಂದೆ ಬಗ್ಗೆಯೇ ಕಿಡಿಕಾರಿದ್ದಾರೆ. ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾರ್ಟರ್ ನಾನು ಕೊಟ್ರೆ ನನ್ನ ಮಗಳು ದೇವರು ಎನ್ನುತ್ತಾರೆ. ಇಂಥವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಎಂದು ಬರೆದುಕೊಳ್ಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಹೆತ್ತ ಮಗಳನ್ನು ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ. ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯನ್ನೂ ಮಾಡಲಿಲ್ಲ. ಕಟ್ಟಿಕೊಂಡ ಹೆಂಡ್ತಿಗೆ ಹೊಡೆದು ಚಿತ್ರಹಿಂಸೆ ಮಾಡಿದ್ದು ಬಿಟ್ಟರೆ ಬೇರೆ ಏನೂ ಇಲ್ಲ. ಎಲ್ಲಾ ಮುಗಿದ್ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು, ವಾವ್ ಎಂದು ತಂದೆಯ ವಾಗ್ದಾಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ ನೀಡಿದ್ದಾರೆ.

ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್ ಅವರ ಹೇಳಿಕೆ ಬಳಿಕ ವಿವಾದ ಶುರುವಾಗಿದೆ. ಆ ಬಗ್ಗೆ ಈಗ ಅವರ ತಾಯಿ ಕೂಡ ಸ್ಪಷ್ಟನೆ ನೀಡಿದ್ದಾರೆ.

ಅಷ್ಟಕ್ಕೂ ಬಾಲಕೃಷ್ಣ ನಾಯ್ಕ್
ಹಲವು ಆರೋಪಗಳನ್ನು ಹೊರಿಸಿರುವುದು ಯಾಕೆ ಎಂಬುದನ್ನು ಚೈತ್ರಾ ಅವರ ತಾಯಿ ವಿವರಿಸಿದ್ದಾರೆ.
‘ದೊಡ್ಡ ಮಗಳು ಹೇಳಿಕೊಟ್ಟ ರೀತಿಯಲ್ಲಿ ಬಾಲಕೃಷ್ಣ ನಾಯ್ಕ್ ಮಾತನಾಡುತ್ತಿದ್ದಾರೆ. ಆಸ್ತಿಗಾಗಿ ಈ ರೀತಿ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

ಗೋವಿಂದ ಪೂಜಾರಿ ಪ್ರಕರಣದಲ್ಲಿಯೂ ಇವರು ಹಣ ಹಂಚಿಕೊಂಡಿದ್ದಾರೆ. ಚೈತ್ರಾ ಬಿಗ್ ಬಾಸ್ ಗೆ ಹೋಗುವ ವಿಚಾರವನ್ನೂ ನನಗೆ ಹೇಳಿಲ್ಲ. ನನ್ನನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಅಮ್ಮ-ಮಗಳು ಹೋಗಿದ್ದರು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ. ತಂದೆಗೆ ಅನ್ನ ಹಾಕದ ಮಗಳು ಏನು ದೇಶ ಸೇವೆ ಮಾಡ್ತಾಳೆ? ತಂದೆಯನ್ನು ದೂರವಿಟ್ಟು ಸಂಸ್ಕೃತಿಯ ಬಗ್ಗೆ ಮಾತನಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಚೈತ್ರಾ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಗೋವಿಂದ ಪೂಜಾರಿ ಪ್ರಕರಣದಲ್ಲಿ ಈಕೆ ಹಣ ಹೊಡೆದಿದ್ದಾಳೆ. ಹಣವನ್ನು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಿದ್ದಾಳೆ. ಪಡ್ಡೆ ಹುಡುಗರ ಹೆಸರಲ್ಲಿಯೂ ಡೆಪಾಸಿಟ್ ಮಾಡಿದ್ದಾಳೆ. ಬಾಂಡ್ ಮೇಲೆ ಸಾಲ ಪಡೆದಿದ್ದಾಳೆ. ನಾನೇ ಮನೆ ನಡೆಸುತ್ತೇನೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾಳೆ. ಹೀಗಾಗಿ ನಾನು ಕಟ್ಟಿದ ಮನೆಯಲ್ಲಿ ನಾನೇ ಅನಾಥನಾಗಿದ್ದೇನೆ.

ಸೈನಿಕರಿಗೆ ಹಣ ಕೊಟ್ಟಿದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಅದು ಹೆಮ್ಮೆಯ ವಿಷಯ ಆಗುತ್ತಿತ್ತು. ಮೋಸದ ಹಣದಲ್ಲಿ ಕೊಟ್ಟು ಏನು ಪ್ರಯೋಜನ ಎಂದು ಕೇಳಿದ್ದಾರೆ.

ಚೈತ್ರಾ ಪತಿ ನಮ್ಮ ಮನೆಯಲ್ಲೇ ಇದ್ದವನು. ಆತನೂ ದೊಡ್ಡ ಕಳ್ಳ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರೇ. ಈಗ ನನ್ನ ಹೆಂಡತಿಯೂ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದಿದ್ದಾರೆ.

ನಾನು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ನನ್ನ ದೊಡ್ಡ ಮಗಳೇ ಆಸರೆಯಾಗಿದ್ದಾಳೆ. ಆಕೆ ಶಾಲೆ ಕೆಲಸ ಮಾಡಿಕೊಂಡು, ಹೊಲಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ನನ್ನ ದೊಡ್ದ ಮಗಳ ಮೇಲೆ ಚೈತ್ರಾ ಸುಳ್ಳು ಅಪವಾದ ಮಾಡಿದ್ದಳು. ಚೈತ್ರಾ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

newlyweds get this fruit ನವದಂಪತಿ ಈ ಹಣ್ಣು ತಿಂದ್ರೆ ಸಿಗತ್ತೆ ನವಚೈತನ್ಯ!

Miss World pageant controversy ಸ್ಥಳೀಯ ಮಹಿಳೆಯರಿಂದ ವಿಶ್ವ ಸುಂದರಿ ಸ್ಪರ್ಧಿಗಳ ಕಾಲು ತೊಳೆಸಿದ ಸರ್ಕಾರ! ವಿಡಿಯೋ ನೋಡಿ

India’s anger over Turkey ಟರ್ಕಿ ಮೇಲೆ ಭಾರತ ಕೆಂಗಣ್ಣು, ಸೆಲೆಬಿ ಭದ್ರತಾ ಅನುಮತಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

TAGGED:Chaitra's mother says he is accusing him for propertyEndless war of words
Share This Article
Facebook Twitter Copy Link Print
Previous Article Naked accused arrest ಬೆತ್ತಲಾಗಿ ಬಂದು 85 ಮೊಬೈಲ್ ಕದ್ದವ ಅರೆಸ್ಟ್
Next Article Scientists’ revolutionary research ವಿಜ್ಞಾನಿಗಳ ಕ್ರಾಂತಿಕಾರಿ ಸಂಶೋಧನೆ, ನಾಯಿಗಳ ನೆರವಿನಿಂದ ಕ್ಯಾನ್ಸರ್ ಪತ್ತೆ!

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?