newsics.com
ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗೂಳಿಯೊಂದು ಏಕಾಏಕಿ ದಾಳಿ ಮಾಡಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದನ್ನು ಕಾಣಬಹುದು. ಇಲ್ಲಿ ಸೇರಿರುವ ಜನರು ಸಂಗೀತ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವೇದಿಕೆಯ ಮೇಲೆ ಕಲಾವಿದರು ಹಾಡು ಹಾಡುತ್ತಿದ್ದು, ಅಲ್ಲೇ ಇರುವ ಜನರು ಡಾನ್ಸ್ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಗೂಳಿಯೊಂದು ಅಲ್ಲಿಗೆ ಬಂದಿದ್ದು, ಏಕಾಏಕಿ ಜನರ ಮೇಲೆ ದಾಳಿ ನಡೆಸಿದೆ. ಈ ವೇಳೆ ಗೂಳಿಯ ಅಟ್ಟಹಾಸಕ್ಕೆ ಜನರು ಚಲ್ಲಾಪಿಲ್ಲಿಯಾಗಿ ಓಡುವುದನ್ನು ನೀವಿಲ್ಲಿ ಕಾಣಬಹುದು.
ಈ ವಿಡಿಯೋವೊಂದು ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಬಳಕೆದಾರರು ‘ಗೂಳಿ ದಾಳಿಯ ದೃಶ್ಯ ಕಂಡಾಗ ಒಂದು ಕ್ಷಣ ಜೀವ ಬಾಯಿ ಬಂದೇ ಬಿಡ್ತು’ ಎಂದಿದ್ದಾರೆ. ಇನ್ನೊಬ್ಬರು, ಈ ಘಟನೆ ಎಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇದೆಯೇ ಎಂದು ಕೇಳಿದ್ದಾರೆ. ಮತ್ತೊಬ್ಬರು, ‘ಈ ಗೂಳಿ ನನ್ನ ಬಿಟ್ಟು ಹೇಗೆ ಪ್ರೋಗ್ರಾಮ್ ಎಂಜಾಯ್ ಮಾಡುತ್ತೀರಿ ಎಂದು ಹೀಗೆ ಮಾಡಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
russian woman praises indian army ಭಾರತೀಯ ಸೇನೆಯನ್ನು ಹಾಡಿ ಹೊಗಳಿದ ರಷ್ಯಾದ ಮಹಿಳೆ: ವೈರಲ್ ವಿಡಿಯೋ ನೋಡಿ