Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health tips ಮದುವೆ ಬಳಿಕ ತೂಕ ಹೆಚ್ಚಾಗದಂತೆ ತಡೆಯಬೇಕಾ? ಈ ರೀತಿ ಮಾಡಿ
ಆರೋಗ್ಯಪ್ರಮುಖ

Health tips ಮದುವೆ ಬಳಿಕ ತೂಕ ಹೆಚ್ಚಾಗದಂತೆ ತಡೆಯಬೇಕಾ? ಈ ರೀತಿ ಮಾಡಿ

Share
2 Min Read
SHARE

newsics.com

ಮದುವೆಯ ಬಳಿಕ ಹೆಣ್ಣಿನ ಜೀವನದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಅದೇ ರೀತಿ ದೈಹಿಕ ಬದಲಾವಣೆಗಳು ಆಗುತ್ತವೆ. ಅದರಲ್ಲೂ ಮದುವೆಯ ಬಳಿಕ ಮಹಿಳೆಯರ ದೇಹ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹೌದು ವಿವಾಹದ ಬಳಿಕ ನಡೆಯುವಂತಹ ಔತಣಕೂಟಗಳು, ಸಂಬಂಧಿಕರ ಮನೆಯ ಪಾರ್ಟಿ, ಆಹಾರ ಪದ್ಧತಿಯ ಬದಲಾವಣೆ, ಹನಿಮೂನ್‌ ಅಂತೆಲ್ಲಾ ಸುತ್ತಾಡುವಾಗ ವ್ಯಾಯಾಮ ಯೋಗ ಮಾಡಲು ಸಾಧ್ಯವಾಗದ ಕಾರಣಗಳಿಂದಾಗಿ ದೇಹ ತೂಕ ಹೆಚ್ಚಾಗುತ್ತದೆ.

ಹೀಗೆ ಮದುವೆಯ ಬಳಿಕ ತೂಕ ಹೆಚ್ಚಾಗಬಾರದು ಎಂದಾದರೆ ನೀವು ಈ ಕೆಲವೊಂದು ಅಭ್ಯಾಸಗಳನ್ನು ತಪ್ಪದೆ ಪಾಲಿಸಬೇಕು.

ಮದುವೆಯ ಬಳಿಕ ತೂಕ ಹೆಚ್ಚಾಗಬಾರದೆಂದರೆ ಹೀಗೆ ಮಾಡಿ: ಕಡಿಮೆ ಪ್ರಮಾಣದಲ್ಲಿ ತಿನ್ನಿರಿ:

ಮದುವೆಯ ಬಳಿಕ ಔತಣಕೂಟ, ಪಾರ್ಟಿ ಅಂತೆಲ್ಲಾ ನಡೆಯುತ್ತಿರುತ್ತವೆ. ಈ ಪಾರ್ಟಿಗಳಲ್ಲಿ ನವ ವಧುವಿಗೆ ಪ್ರೀತಿಯಿಂದ ಎಲ್ಲರೂ ಹೆಚ್ಚು ಹೆಚ್ಚು ತಿನ್ನಿಸುತ್ತಾರೆ. ಹೀಗೆ ಹೆಚ್ಚು ಆಹಾರ ತಿನ್ನುವ ಕಾರಣ ಮದುವೆಯ ಬಳಿಕ ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಔತಣಕೂಟದಲ್ಲಿ ಮಿತ ಪ್ರಮಾಣದಲ್ಲಿ ಆಹಾರಗಳನ್ನು ಸೇವನೆ ಮಾಡಿ.

ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಿ:

ನಿಮ್ಮ ಆಹಾರವು ನಿಮ್ಮ ತೂಕದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಆದ್ದರಿಂದ ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ತಾಜಾ ಹಣ್ಣುಗಳು, ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ. ಇವು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುವುದು ಮಾತ್ರವಲ್ಲದೆ ತೂಕ ಇಳಿಸಲು ಕೂಡ ಸಹಕಾರಿ.

ಪ್ರತಿದಿನ ವ್ಯಾಯಾಮ ಮಾಡಿ: ಮದುವೆಯ ಬಳಿಕ ಹೆಚ್ಚಿನವರು ವ್ಯಾಯಾಮ ಮಾಡುವುದನ್ನೇ ತಪ್ಪಿಸುತ್ತಾರೆ. ಇದು ಕೂಡ ತೂಕ ಹೆಚ್ಚಾಗಲು ಒಂದು ಕಾರಣ. ಹಾಗಿರುವಾಗ ಪ್ರತಿನಿತ್ಯ ನಿಮಗಾಗಿ ಅರ್ಧ ಗಂಟೆ ಸಮಯವನ್ನು ಮೀಸಲಿಟ್ಟು, ಜಾಗಿಂಗ್‌, ವಾಕಿಂಗ್‌ ಸೈಕ್ಲಿಂಗ್‌ ಇತ್ಯಾದಿ ಚಟುವಟಿಕೆಗಳನ್ನು ಮಾಡಿ. ಇದು ಕ್ಯಾಲೊರಿಗಳನ್ನು ಸುಡಲು ಮತ್ತು ನಿಮ್ಮನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಹೆಚ್ಚು ನೀರು ಕುಡಿಯಿರಿ:

ನೀರು ಕುಡಿಯುವುದರಿಂದ ದೇಹವು ಹೈಡ್ರೇಟೆಡ್ ಆಗಿರುವುದಲ್ಲದೆ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಹೀಗೆ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದಿಂದ ತ್ಯಾಜ್ಯವನ್ನು ಕೂಡಾ ಹೊರ ಹಾಕಬಹುದು.

ಆರೋಗ್ಯಕರ ಪಾನೀಯಗಳನ್ನು ಸೇವಿಸಿ:

ಸ್ಮೂಥಿ, ಮಿಲ್ಕ್‌ಶೇಕ್‌ ಬದಲಿಗೆ ತಾಜಾ ಹಣ್ಣಿನ ರಸ, ಸಕ್ಕರೆ ರಹಿತ ಹಣ್ಣಿನ ಜ್ಯೂಸ್‌, ನಿಂಬೆ ಹಣ್ಣಿನ ಜ್ಯೂಸ್‌ ಸೇವನೆ ಮಾಡಿ. ಇದಲ್ಲದೆ ನೀವು ಗ್ರೀನ್‌ ಟೀ ಕುಡಿಯುವ ಅಭ್ಯಾಸವನ್ನು ಕೂಡಾ ರೂಢಿಸಿಕೊಳ್ಳಿ. ಇದು ಕೂಡ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಒತ್ತಡವನ್ನು ಕಡಿಮೆ ಮಾಡಿ: ಮದುವೆಯ ಸಮಯದಲ್ಲಿ ಎಲ್ಲಾ ಕಾರ್ಯಗಳು ಅಚ್ಚುಕಟ್ಟಾಗಬೇಕು ಅದು ಇದು ಅಂತೆಲ್ಲಾ ಒತ್ತಡಕ್ಕೊಳಗಾಗುವುದು ಸಹಜ. ಆದರೆ ಈ ಒತ್ತಡವು ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದಲ್ಲದೆ, ಅದು ನಿಮ್ಮ ತೂಕದ ಮೇಲೂ ನೇರ ಪರಿಣಾಮ ಬೀರುತ್ತದೆ. ಹೌದು ಒತ್ತಡವು ಕಾರ್ಟಿಸೋಲ್ ಎಂಬ ಹಾರ್ಮೋನ್‌ನ್ನು ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಒತ್ತಡವನ್ನು ನಿವಾರಿಸಲು ಯೋಗ, ಧ್ಯಾನ, ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ.

ಮದುವೆಯ ಬಳಿಕ ತೂಕ ಹೆಚ್ಚಾಗದೆ ಸ್ಲಿಮ್‌ ಹಾಗೂ ಫಿಟ್‌ ಆಗಿರಬೇಕೆಂದು ಬಯಸಿದರೆ, ನೀವು ಖಂಡಿತವಾಗಿಯೂ ಈ ಅಭ್ಯಾಸಗಳನ್ನು ಪಾಲಿಸಿ.

Gims Hospital ಜಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್, ಗೋಡೆ ಒಡೆದು 9 ಮಂದಿ ಸಿಬ್ಬಂದಿಯ ರಕ್ಷಣೆ

TAGGED:Want to prevent weight gain after marriage? Do this:
Share This Article
Facebook Twitter Copy Link Print
Previous Article Gims Hospital ಜಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್, ಗೋಡೆ ಒಡೆದು 9 ಮಂದಿ ಸಿಬ್ಬಂದಿಯ ರಕ್ಷಣೆ
Next Article Health tips ಇದೇ ನೋಡಿ ಜಪಾನಿಯರ ಆರೋಗ್ಯದ ಗುಟ್ಟು

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಲೈಫ್‌ಸ್ಟೈಲ್ಆರೋಗ್ಯ

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?