newsics.com
ನವದೆಹಲಿ: ಸೋಮವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಖಡಕ್ ಭಾಷಣದ ಬೆನ್ನಲ್ಲೇ ಭಾರತದ ಗಡಿಯಲ್ಲಿದ್ದ ಪಾಕಿಸ್ತಾನದ ಡ್ರೋನ್ ಗಳು ವಾಪಸ್ ಸಾಲುಗಟ್ಟಿ ಹೋಗಿದ್ದು ಕಂಡುಬಂದಿದೆ.
ಸೋಮವಾರ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಪಾಕಿಸ್ತಾನದ ಅಣು ಬಾಂಬ್ ಬೆದರಿಕೆ ಬ್ಲಾಕ್ ಮೇಲ್ಗೆ ಹೆದರೋದಿಲ್ಲ. ನಮ್ಮ ಸಹೋದರಿಯರ ಸಿಂದೂರ ತೆಗೆದ ಭಯೋತ್ಪಾದಕರಿಗೆ ಪರಿಣಾಮದ ಎಚ್ಚರಿಕೆ ಸಂದೇಶ ರವಾನಿಸಿದ್ದೇವೆ. ಆಪರೇಷನ್ ಸಿಂದೂರ ಪ್ರತಿಯೊಬ್ಬ ಭಾರತೀಯರ ಭಾವನೆಯ ಸಂಕೇತ ಎಂಬುದಾಗಿ ಖಡಕ್ ಸಂದೇಶ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂದೂರ್ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದರು. ಪಾಕಿಸ್ತಾನದೊಂದಿಗೆ ಮಾತುಕತೆ ಏನಿದ್ದರೂ ಪಿಒಕೆ ಹಾಗೂ ಭಯೋತ್ಪಾದನೆ ನಿಯಂತ್ರಣದ ಬಗ್ಗೆ ಮಾತ್ರವೇ ಆಗಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ. ಯಾವತ್ತೂ ರಕ್ತ ಮತ್ತು ನೀರು ಒಟ್ಟಿಗೆ ಹರಿಯೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದರು.
ಪ್ರಧಾನಿ ಮೋದಿ ಭಾಷಣದ ಸ್ವಲ್ಪ ಸಮಯದ ನಂತರ ಪಾಕ್ ಡ್ರೋನ್ಗಳು ಹಿಂತಿರುಗಿದ್ದರಿಂದ ಜೆ-ಕೆ ಸಾಂಬಾದಲ್ಲಿ ಡ್ರೋನ್ಗಳ ಸಾಲು ಕೆಂಪು ಗೆರೆಗಳ ರೀತಿಯಲ್ಲಿ ಕಂಡುಬಂದಿವೆ.
ಪಾಕಿಸ್ತಾನದ ಡ್ರೋನ್ಗಳು ಸಾಲುಗಟ್ಟಿ ಪಾಕ್ಗೆ ಸಾಗಿದ ವೀಡಿಯೋ ವೈರಲ್ ಆಗಿದೆ.
https://twitter.com/i/status/1921956089274224737
Narendra Modi: ಭಾರತೀಯರ ಸಿಂದೂರ ಅಳಿಸಿದರೆ ಏನಾಗುತ್ತೆ ಅಂತಾ ಉಗ್ರರಿಗೆ ತೋರಿಸಿದ್ದೇವೆ: ಪಿಎಂ ಮೋದಿ