newsics.com
ಬಾಗಲ್ಪುರ: ಭೀಕರ ಬೆಂಕಿ ಅವಘಡದಲ್ಲಿ ಸುಮಾರು 36ಕ್ಕೂ ಮನೆಗಳು ಸುಟ್ಟು ಭಸ್ಮವಾಗಿದ್ದು, ಹಲವರು ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ.
ಕಾಡಿನ ಬೆಂಕಿಗೆ ಎರಡು ಹಸುಗಳು ಮತ್ತು ಮೂರು ಮೇಕೆಗಳು ಸುಟ್ಟು ಕರಕಲಾಗಿವೆ ಎಂದು ನಿವಾಸಿಗಳು ಹೇಳಿದ್ದಾರೆ. ಕುಟುಂಬದ ಹೆಚ್ಚಿನ ಸದಸ್ಯರು ಮೆಕ್ಕೆಜೋಳ ಕೊಯ್ಲಿಗೆ ಹೊಲಗಳಿಗೆ ಹೋಗಿದ್ದರು. ಬೆಂಕಿಯ ಜ್ವಾಲೆ ಮತ್ತು ಹೊಗೆಯನ್ನು ನೋಡಿ, ಹತ್ತಿರದ ಗ್ರಾಮಸ್ಥರು ಮತ್ತು ಹೊಲಗಳಲ್ಲಿ ಬೆಳೆ ಸಿದ್ಧಪಡಿಸುತ್ತಿದ್ದ ಜನರು ಓಡಿ ಬಂದರು, ಆದರೆ ಅಷ್ಟೊತ್ತಿಗಾಗಲೇ ಮನೆಯ ಎಲ್ಲಾ ವಸ್ತುಗಳು ಸುಟ್ಟು ಬೂದಿಯಾಗಿದ್ದವು.ಬೆಂಕಿಯ ಜ್ವಾಲೆಯನ್ನು ನೋಡಿ ಧಾವಿಸಿದರೂ, ಹಲವಾರು ನಿಮಿಷಗಳ ಕಾಲ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.