newsics.com
ಬೆಂಗಳೂರು: ಪಾಕಿಸ್ತಾನಕ್ಕೆ ತೆರಳಲು ಕಾಲಾವಕಾಶ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಸೂಚನೆ ನೀಡಲಾಗಿದೆ. ಇದರಿಂದ ಮದ್ವೆಗೆಂದು ಮೈಸೂರಿಗೆ ಬಂದು ತಾಯಿ ಜತೆ ಇದ್ದ ಪಾಕಿಸ್ತಾನ ಪೌರತ್ವ ಹೊಂದಿರುವ ಮೂರು ಮಕ್ಕಳು ವಾಪಸ್ ತಮ್ಮ ದೇಶಕ್ಕೆ ತೆರಳಲಾಗದೆ ಕೋರ್ಟ್ ಮೊರೆ ಹೋಗಿದ್ದು, ಪಾಕಿಸ್ತಾನಕ್ಕೆ ತೆರಳಲು ಸಮಯ ನೀಡುವಂತೆ ಮಕ್ಕಳ ಪರವಾಗಿ ಮೈಸೂರು ಮೂಲದ ತಾಯಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ವಜಾಗೊಳಿಸಿ ಆದೇಶ ಹೊರಡಿಸಿದೆ. ಮಾನವೀಯತೆ ಆಧಾರದಲ್ಲಿ ಮೇ 15ರವರೆಗೆ ಕಾಲಾವಕಾಶಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಮಾನವೀಯತೆ ತೋರಿದ್ದಕ್ಕೆ ಈಗ ಅನುಭವಿಸುತ್ತಿದ್ದೇವೆ ಎಂದಿದೆ.
ಪಾಕಿಸ್ತಾನಿ ತಂದೆ, ಮೈಸೂರಿನ ತಾಯಿಗೆ ಜನಿಸಿರುವ ಮೂವರು ಮಕ್ಕಳು ಬೀಬಿ ಯಮೀನಾ, ಮೊಹಮ್ಮದ್ ಮುದಸ್ಸಿರ್, ಮೊಹಮ್ಮದ್ ಯೂಸುಫ್ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ವಾಪಸ್ ಹೋಗಲು ಸಮಯಾವಕಾಶ ನೀಡಬೇಕೆಂದು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಡಿಎಸ್ಜಿ ಶಾಂತಿಭೂಷಣ್ ವಾದ ಮಂಡಿಸಿದ್ದರು.
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ 8 ವರ್ಷದ ಬಿಬಿ ಯಾಮಿನಾ, 4 ವರ್ಷದ ಮೊಹಮ್ಮದ್ ಯುದಾಸಿರ್ ಹಾಗೂ 3 ವರ್ಷದ ಮೊಹಮ್ಮದ್ ಯೂಸುಫ್ ಈ ಅರ್ಜಿ ಸಲ್ಲಿಸಿದ್ದರು.
RAJNATH SINGH ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ – ರಾಜನಾಥ್ ಸಿಂಗ್ ಮಹತ್ವದ ಹೇಳಿಕೆ