newsics.com
ಕಲಾವಿದರು ಯಾವಾಗಲೂ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ತಾವು ಸೇವನೆ ಮಾಡೋ ಆಹಾರದ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ದೇಹವನ್ನು ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿ ಹಲವಾರು ಜೀವನ ಶೈಲಿಗಳಲ್ಲಿ ಬದಲಾವಣೆ ಮಾಡುತ್ತಾರೆ. ಇನ್ನು ಸರಿಯಾದ ರೀತಿಯಲ್ಲಿ ವರ್ಕೌಟ್ ಆರಂಭಿಸಿದರೆ ಎಲ್ಲವೂ ಸರಿ ಆಗುತ್ತದೆ. ದೇಹದಲ್ಲಿ ಬೊಜ್ಜಿನ ಅಂಶ ಕಡಿಮೆ ಆಗುತ್ತದೆ.ಆದರೆ ನಟಿ ರಿತಿಕಾ ಕನ್ನಡಿಯಲ್ಲಿ ತಮ್ಮದೇ ಹೊಟ್ಟೆ ನೋಡಿ ಅವರಿಗೆ ಶಾಕ್ ಆಗಿದೆ.
ರಿತಿಕಾ ಅವರು ಮೂಲತ ಮುಂಬೈನವರು. ಅವರು 2016ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೊದಲು ತಮಿಳು, ತೆಲುಗು ಸಿನಿಮಾಗಳನ್ನು ಮಾಡುತ್ತಿದ್ದ ಅವರು ನಂತರ ಹಿಂದಿ, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ವೆಟ್ಟೈಯನ್’ ಸಿನಿಮಾದಲ್ಲಿ ರಿತಿಕಾ ನಟಿಸಿದ್ದರು. ಈ ಚಿತ್ರ ಹಿಟ್ ಆಯಿತು. ಆ ಬಳಿಕ ರಿತಿಕಾ ಬ್ರೇಕ್ ಪಡೆದರು. ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಈ ಅವಧಿಯಲ್ಲಿ ರಿತಿಕಾ ಸಂಪೂರ್ಣವಾಗಿ ಶೇಪ್ ಕಳೆದುಕೊಂಡಿದ್ದರು.
ಇದೀಗ ರಿತಿಕಾ ನಿರಂತರವಾಗಿ ಬದ್ಧತೆಯಿಂದ ವರ್ಕೌಟ್ ಮಾಡಿದ್ದು, ಅವರ ದೇಹ ಶೇಪ್ಗೆ ಬಂದಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ‘ನಾನು ತೂಕ ಹೆಚ್ಚಿಸಿಕೊಂಡಿದ್ದೇನೆ. ಈಗ ನನ್ನ ತೂಕ 72 ಕೆಜಿ’ ಎಂದು ಅವರು ಹೇಳಿದ್ದಾರೆ. ಆ ಬಳಿಕ ಅವರದ್ದೇ ಹೊಟ್ಟೆ ನೋಡಿ ಅವರಿಗೆ ಭಯ ಆಗಿದೆ. ಆ ಬಳಿಕ ಅವರ ಸ್ಫೂರ್ತಿದಾಯಕ ಜರ್ನಿ ಪ್ರಾರಂಭ ಆಗಿದೆ. ಅವರು ನಾನಾ ರೀತಿಯ ವರ್ಕೌಟ್ ಆರಂಭಿಸಿದ್ದಾರೆ. ಈ ಬಗ್ಗೆ ಕಮೆಂಟ್ ಬಾಕ್ಸ್ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
https://www.instagram.com/reel/DJPHyZasrkx/?igsh=Z2xtejM5MWRrdzJz