newsics.com
ಜಮ್ಮು ಮತ್ತು ಕಾಶ್ಮೀರದ ಪೆಹಾಲ್ಗಾಮ ನಲ್ಲಿ ಉಗ್ರರು ನಡೆಸಿದ ನರಮೇದದಿಂದ ಇಡೀ ದೇಶವೇ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಈ ಮಧ್ಯೆ ಕೋಲಾರ ರೈತರು, ಪಾಕಿಸ್ತಾನಕ್ಕೆ ಟೊಮೆಟೊ ಸರಬರಾಜು ಮಾಡಲ್ಲ ಎಂದು ಖಡಕ್ ನಿರ್ಧಾರ ತೆಗೆದುಕೊಂಡಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪರಿಣಾಮ ಕೋಲಾರದ ರೈತರು ಮತ್ತು ವರ್ತಕರು ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಘೋಷಣೆ ಮಾಡಿದ್ದಾರೆ. ಕೋಲಾರದಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡುತ್ತಿದ್ದ ಟೊಮೆಟೊಗೆ ಸಂಪೂರ್ಣ ನಿರ್ಬಂಧವೇರಿದ್ದು,ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಟೊಮೆಟೊ ಸರಬರಾಜು ಮಾಡದಿರಲು ನಿರ್ಧಾರ ಮಾಡಿದ್ದಾರೆ. ಏಷ್ಯಾದ ಎರಡನೇ ಅತಿದೊಡ್ಡ ಕೃಷಿ ಮಾರುಕಟ್ಟೆಯೆಂದೇ ಖ್ಯಾತಿ ಪಡೆದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಪ್ರತಿದಿನ 700 ರಿಂದ 800 ಟನ್ ಟೊಮೆಟೊ ರಸ್ತೆ ಮಾರ್ಗವಾಗಿ ಪಾಕಿಸ್ತಾನಕ್ಕೆ ಸರಬರಾಜಾಗುತ್ತಿತ್ತು. ಆದರೆ, ಈಗ ಈ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಲು ರೈತರು ಮತ್ತು ಮಂಡಿ ಮಾಲೀಕರು ಒಗ್ಗಟ್ಟಿನ ನಿರ್ಧಾರ ಕೈಗೊಂಡಿರುವುದು ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.