newsics.com
ಬೆಂಗಳೂರು : ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ಮನೆ ಛಿದ್ರ ಛಿದ್ರವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ನಡೆದಿದೆ.
ಮೃತರನ್ನು ನಾಗರಾಜ್ (50) ಶ್ರೀನಿವಾಸ್ (50) ಎಂದು ಗುರುತಿಸಲಾಗಿದೆ. ಮೃತ ನಾಗರಾಜ್ ಪತ್ನಿ ಲಕ್ಷ್ಮಿದೇವಿ ಹಾಗೂ ಅವರ ಮಕ್ಕಳಾದ ಬಸನಗೌಡ ಹಾಗೂ ಅಭಿಷೇಕ್ ಗಾಯಗೊಂಡಿದ್ದಾರೆ.
ಮನೆಯಲ್ಲಿ ದೀಪ ಹಚ್ಚಿದ ಸಂದರ್ಭದಲ್ಲಿ ಮಗ ಅಭಿಷೇಕ್ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮುಂದಾಗಿದ್ದರು. ಈ ವೇಳೆ ಗ್ಯಾಸ್ ಲೀಕ್ ಆಗಿ ಅವಘಡ ಸಂಭವಿಸಿದೆ.