newsics.com
ಸಾಮಾಜಿಕ ಜಾಲತಾಣದಲ್ಲಿ ಪತಿ ಅಭಿಷೇಕ್ ಜೊತೆಯಾಗಿ ದೇವಸ್ಥಾನದಲ್ಲಿ ನಿಂತಿರುವ ಫೋಟೋವನ್ನು ಗಾಯಕಿ ಪೃಥ್ವಿ ಭಟ್ ಶೇರ್ ಮಾಡಿದ್ದಾರೆ. ಈ ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.
ಇತ್ತೀಚೆಗೆ ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆಯಾಗಿದ್ದರು. ಜೀ ಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಕಾಸರಗೋಡು ಮೂಲದ ಗಾಯಕಿ ಪೃಥ್ವಿ ಭಟ್ ಮಾರ್ಚ್ 27 ರಂದು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ ಅಭಿಷೇಕ್ ಎಂಬವರ ಜೊತೆ ಮದುವೆಯಾಗಿದ್ದರು. ಮಗಳ ಮದುವೆ ಬಗ್ಗೆ ತಂದೆ ಶಿವಪ್ರಸಾದ್ ಮಾತನಾಡಿದ್ದ ಆಡಿಯೋ ಹೊರಬಂದು ಚರ್ಚೆ ಹುಟ್ಟುಹಾಕಿತ್ತು. ಕೆಲವರು ಪೋಷಕರನ್ನು ನೋಯಿಸಬೇಡಿ ಅವರಿಗೆ ತಿಳಿ ಹೇಳಿ ನಿಮ್ಮಿಬ್ಬರನ್ನು ಒಪ್ಪುವಂತೆ ಮನವೊಲಿಸಿ ಎಂದು ಸಲಹೆ ನೀಡಿದ್ದಾರೆ.
https://www.instagram.com/p/DI_Z9BHSYZw/?igsh=bjA5MTV4MG42d3ps