newsics.com
ನವದೆಹಲಿ : ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ 28 ಮಂದಿ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ ಕರೆಯಲಾಗಿದೆ.
ಲಷ್ಕರ್ ಎ ತೋಯ್ಬಾ ಸಂಘಟನೆಯ ಅಂಗವಾದ ಒಂದು ತಂಡ ಈ ದಾಳಿಯ ಹೊಣೆ ಹೊತ್ತಿದ್ದು, ನಾಲ್ವರು ಉಗ್ರರು ಹಾಗೂ ಮೂವರು ದಾಳಿಯ ಪ್ರಾಯೋಜಕರನ್ನು ಈಗಾಗಲೇ ಗುರುತಿಸಲಾಗಿದೆ. ಈಗಾಗಲೇ ಪಾಕಿಸ್ತಾನದ ವಿರುದ್ದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮುನ್ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಅಲ್ಲದೇ, ಪಾಕಿಸ್ತಾನವನ್ನು ಎಲ್ಲಾ ರೀತಿಯಿಂದಲೂ ಮೂಲೆಗುಂಪು ಮಾಡಲು ಭಾರತ ಸರ್ಕಾರ ಶ್ರಮಿಸುತ್ತಿದೆ.
ಈಗಾಗಲೇ ಅಮೆರಿಕ, ರಷ್ಯಾ, ಬ್ರಿಟನ್ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿರುವುದು ಪಾಕಿಸ್ತಾನವನ್ನು ಆತಂಕಕ್ಕೊಳಪಡಿಸಿದೆ.
ಇನ್ನು ಇಂದು ನಡೆಯುವ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಪ್ರತಿಪಕ್ಷಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ .
Pahalgam: ಪಹಲ್ಗಾಮ್ ದಾಳಿಯ ಉಗ್ರರಿಗೆ ಧನ್ಯವಾದ ತಿಳಿಸಿದ ಜಾರ್ಖಂಡ್ ವ್ಯಕ್ತಿ ಅರೆಸ್ಟ್