newsics.com
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ರಾಜ್ಯ ಸರ್ಕಾರ ಸರಬರಾಜು ಮಾಡುವ ಪಠ್ಯಪುಸ್ತಕದ ಬೆಲೆ ಕೂಡ ಶೇಕಡ 10ರಷ್ಟು ಹೆಚ್ಚಳವಾಗಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘವು ಶಾಲೆಗಳ ಬೇಡಿಕೆಗೆ ಅನುಗುಣವಾಗಿ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸುತ್ತದೆ. ಸರ್ಕಾರವು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪುಸ್ತಕವನ್ನು ನೀಡುತ್ತಿದೆ, ಆದರೆ ಖಾಸಗಿ ಶಾಲೆಗೆ ನಿಗದಿತ ದರದಲ್ಲಿ ಪುಸ್ತಕ ನೀಡುತ್ತಿದೆ.
ಆದರೆ ಈ ವರ್ಷ ಖಾಸಗಿ ಶಾಲೆಗೆ ನೀಡುವ ಪುಸ್ತಕದ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಈ ಮೂಲಕ ಖಾಸಗಿ ಶಾಲೆಯಲ್ಲಿ ಓದಿಸುವ ಪೋಷಕರಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಈ ಹಿಂದೆ ಕೆಲ ಪುಸ್ತಕಕ್ಕೆ 34 ರೂ. ಇತ್ತು ಇದೀಗ 36 ರೂಗೆ ಏರಿಕೆ ಮಾಡಲಾಗಿದೆ.
ಇನ್ನು ಕೆಲವು ಪುಸ್ತಕದ ಬೆಲೆಯನ್ನು ಶೇ.100 ರಷ್ಟು ಏರಿಕೆ ಮಾಡಿದ್ದು, ಈ ಹಿಂದೆ ಇಂಗ್ಲೀಷ್ ಪಠ್ಯಪುಸ್ತಕದ ಬೆಲೆ 25 ರೂ. ಇತ್ತು.. ಆದರೆ ಈ ವರ್ಷದಿಂದ 51 ರೂಗೆ ಏರಿಕೆಯಾಗಿದೆ. ಸದ್ಯ ಈ ಬೆಲೆ ಏರಿಕೆಯಿಂದಾಗಿ ಪೋಷಕರು ಸಾಕಾಗಿ ಹೋಗಿದ್ದಾರೆ.
14 ಶೀರ್ಷಿಕೆಗಳು 1ರಿಂದ 17 ರೂ, 86 ಶೀರ್ಷಿಕೆಗಳು 1 ರಿಂದ 27 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಪಠ್ಯ ಪುಸ್ತಕಗಳ ಒಟ್ಟಾರೆ ಏರಿಕೆಯ ಪ್ರಮಾಣ ನೋಡಿದಾಗ ಶೇಕಡ 10ರಷ್ಟು ಹೆಚ್ಚಳ ಆಗಿರುವುದು ಬೆಳಕಿಗೆ ಬಂದಿದೆ. ಇದರಿಂದ ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಮೇಲೆಯೂ ಪರಿಣಾಮ ಬೀರಲಿದ್ದು, ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ.
https://www.newsics.com/2025/04/22/pope-francis-passes-away-pope-francis-passes-away-wow-his-salary-is-5900-how-much-is-his-property-what-was-his-lifestyle-like/