newsics.com
ಬಿಗ್ ಬಾಸ್’ ಬೆಡಗಿ ಸಾನ್ಯ ಅಯ್ಯರ್ ಸದಾ ಒಂದಲ್ಲಾ ಒಂದು ಗ್ಲ್ಯಾಮರಸ್ ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ಟ್ರೋಲ್ ಈ ಬಗ್ಗೆ ಮಾತನಾಡಿದ ಸಾನ್ಯ ಅಯ್ಯರ್, ಅವರ ಬಟ್ಟೆಯಿಂದ ಜನ ಅವರನ್ನು ಹೇಗೆ ಅಳೆಯುತ್ತಾರೆ ಎಂಬುದನ್ನು ಮಾತನಾಡುತ್ತಾ ಬೇಸರ ಹೊರ ಹಾಕಿದ್ದಾರೆ.
ಇದೀಗ ʻಬಿಗ್ ಬಾಸ್ʼ ಮತ್ತು ʻಪುಟ್ಟ ಗೌರಿʼ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ. ನಾನು ಧರಿಸುವ ಬಟ್ಟೆಯಿಂದ ಜನರು ನೋಡುವ ದೃಷ್ಟಿನೇ ಬದಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ರಿಯಾಕ್ಟ್ ಮಾಡಿದ ಅವರು, “ನನಗೆ, ಓ.. ಮನೆ ಮುಂದೆ ಬೃಂದಾವನ ಮಾಡೋದೆಲ್ಲಾ ಅನಾಚಾರ ಅಂತ ಹಲವರು ಹೇಳುತ್ತಾರೆ. ಅವರ ಪ್ರಕಾರ ಅಧ್ಮಾತ್ಮದ ದಾರಿಯಲ್ಲಿ ಇದ್ದರೆ, ಮೈ ತುಂಬಾ ಬಟ್ಟೆ ಹಾಕೊಂಡು ಓಡಾಡಬೇಕು. ನನ್ನನ್ನು ಸಾನ್ಯ ಅಯ್ಯರ್ ಆಗಿ ಸ್ವೀಕರಿಸೋಕೆ ಜನ ರೆಡಿ ಇಲ್ಲ. ಎಲ್ಲರೂ ʻಪುಟ್ಟ ಗೌರಿʼ ಆಗಿಯೇ ನನ್ನನ್ನು ನೋಡೋಕೆ ಇಷ್ಟ ಪಡುತ್ತಾರೆ. ಅದನ್ನು ಪ್ರಾಬ್ಲಂ ಅಂತಲೂ ನಾನು ಹೇಳುವುದಕ್ಕೆ ಆಗಲ್ಲ, ಅದರಿಂದ ನನಗೆ ಒಳ್ಳೆಯದು ಆಗಿದೆ. ಯಾಕೆಂದ್ರೆ ಅದು ಅಷ್ಟೊಂದು ಪ್ರೀತಿ ಕೊಟ್ಟಿದೆ. ಅದರ ಜತೆ ನನಗೆ ಈ ಸಮಸ್ಯೆಗಳು ತಪ್ಪಿದ್ದಲ್ಲ. ʻಪುಟ್ಟಗೌರಿʼ ಆಗಿಯೇ ಎಲ್ಲರೂ ನನ್ನನ್ನು ನೋಡಿದ್ದರೆ, ಮುಂದೆ ಸಿನಿಮಾಗಳು ಮಾಡಿದಾಗ ಆ ಪಾತ್ರಗಳಲ್ಲಿಯೂ ಜನರು ನನ್ನನ್ನು ಸ್ವೀಕರಿಸಬೇಕು ಅಲ್ವಾ, ಇದೇ ಕಾರಣಕ್ಕೆ ಸಾನ್ಯ ಅಯ್ಯರ್ ಆಗಿ ನನ್ನನ್ನು ಜನ ನೋಡಲಿ ಅಂತಲೇ ʻಬಿಗ್ ಬಾಸ್ʼ ಒಪ್ಪಿಕೊಂಡೆ ಎಂದು ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಾನ್ಯ ಅಯ್ಯರ್ ಹೇಳಿಕೊಂಡಿದ್ದಾರೆ.
https://www.newsics.com/2025/04/16/the-temple-flagpole-toppled-in-the-fierce-wind/