newsics.com
ರಿಯಾಲಿಟಿ ಶೋ ಮೂಲಕ ಜನಪ್ರಿಯರಾದ ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸದ್ದು ಮಾಡ್ತಿದ್ದಾರೆ.ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರೀಲ್ಸ್ನಲ್ಲಿ ನಿವೇದಿತಾ ಗೌಡ ಸೀರೆಯಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ಉದ್ಯಾನ ನಗರಿಯಲ್ಲಿ ವರುಣ ತಂಪೆರೆದಿದ್ದಾನೆ. ಆ ಮಳೆಯಲ್ಲಿ ನಿವೇದಿತಾ ಗೌಡ ಮಿಂದೆದ್ದಿದ್ದಾರೆ. ರೇನ್ ಆಂಡ್ ಸಾರಿ ಅಂತ ಶೀರ್ಷಿಕೆ ಹಾಕಿ ಮ್ಯೂಸಿಕ್ ಗೆ ಹೆಜ್ಜೆ ಹಾಕಿರುವ ನಿವೇದಿತಾ ಗೌಡ ರೀಲ್ಸ್ ಒಂದೇ ಗಂಟೆಯಲ್ಲಿ 22 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಪಡೆದಿದೆ. ನೂರಾರು ಮಂದಿ ನಿವೇದಿತಾ ಈ ಪೋಸ್ಟ್ ಗೆ ಕಮೆಂಟ್ ಹಾಕಿದ್ದಾರೆ.
ಹಿಂದೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದ ನಿವೇದಿತಾರನ್ನು ಈಗ ಜನ ನಿಧಾನವಾಗಿ ಮೆಚ್ಚಿಕೊಳ್ತಿದ್ದಾರೆ. ಯಾರು ಏನೇ ಹೇಳಿದ್ರೂ ನಿವೇದಿತಾ ತಮ್ಮ ಸ್ಟೈಲ್ ಬಿಟ್ಟಿಲ್ಲ. ಬಳಕೆದಾರರರ ಕಮೆಂಟ್ ಗೆ ಕ್ಯಾರೇ ಎಂದಿಲ್ಲ
ನಿವೇದಿತಾ ಈ ವಿಡಿಯೋ ನೋಡಿದ ಫ್ಯಾನ್ಸ್, ನೀವು ನೆಕ್ಸ್ಟ್ ನ್ಯಾಷನಲ್ ಕ್ರಷ್ ಅಂತ ಕಮೆಂಟ್ ಮಾಡಿದ್ದಾರೆ. ಹಾಟ್ ನಿವೇದಿತಾ, ಸೂಪರ್ ಎನ್ನುವ ಕಮೆಂಟ್ ಗಳು ಅಲ್ಲಲ್ಲಿ ಬಂದಿವೆ.
ಚಂದನ್ ಶೆಟ್ಟಿ ಮದುವೆಯಾಗಿ, ವಿಚ್ಛೇದನ ಪಡೆದುಕೊಂಡ್ರು. ಇನ್ಸ್ಟಾಗ್ರಾಮ್, ಯುಟ್ಯೂಬ್ ಗಳಲ್ಲಿ ವಿಡಿಯೋ ಹಂಚಿಕೊಳ್ಳುವ ನಿವೇದಿತಾ, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಳ್ತಿದ್ದಾರೆ.
https://www.instagram.com/reel/DIdkfzUpuG3/?igsh=MTNpdDhmN3pxNGl0NA==
https://www.newsics.com/2025/04/15/woman-breaks-her-leg-after-refusing-to-marry/