newsics.com
ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್ ನ ಮೂಳೆ ಮುರಿದಿರುವ ಘಟನೆ ಹರ್ಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.
ಬಾಯ್‌ಫ್ರೆಂಡ್‌ಗೆ ಮಹಿಳೆಯೊಬ್ಬಳು ಸರಿಯಾಗಿ ಹೊಡೆಸಿದ್ದಾಳೆ. ಪರಿಣಾಮ ಆತನ ದೇಹದಲ್ಲಿ 13 ಕಡೆ ಮೂಳೆ ಮುರಿದಿದ್ದು, 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಗುಲ್ಶನ್ ಹಲ್ಲೆಗೊಳಗಾದ ಯುವಕ. ಇವರಿಬ್ಬರಿಗೂ ಈಗಾಗಲೇ ಒಂದೊಂದು ಮದುವೆಯಾಗಿದ್ದು, ಇಬ್ಬರೂ ತಮ್ಮ ಪತಿ/ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿಲ್ಲ. ಗುಲ್ಶನ್ ಪತ್ನಿಯಿಂದ ದೂರಾಗಿ ವಾಸ ಮಾಡುತ್ತಿದ್ದಾನೆ. 2019ರಲ್ಲಿ ಈ ವಿವಾಹಿತರ ಪ್ರೇಮ ಸಂಬಂಧ ಶುರುವಾಗಿದೆ. ಮೊಬೈಲ್ ಶಾಪ್ ಹೊಂದಿದ್ದ ಗುಲ್ಶನ್ ಅಂಗಡಿಗೆ ಮಹಿಳೆ ಆಗಾಗ ಭೇಟಿ ನೀಡಿದ ನಂತರ ಪರಿಚಯವಾಗಿ ಈ ಪ್ರೇಮ ಸಂಬಂಧ ಶುರುವಾಗಿದೆ.
ಗುಲ್ಶನ್ ಪತ್ನಿಯಿಂದ ದೂರಾಗಿ ವಾಸ ಮಾಡ್ತಿದ್ರೆ, ಇತ್ತ ಈ ಮಹಿಳೆ ಪತಿಯಿಂದ ವಿಚ್ಛೇದನಕ್ಕಾಗಿ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾಳೆ. ನವ ಭಾರತ್ ಟೈಮ್ಸ್‌ನ ವರದಿಯ ಪ್ರಕಾರ ಮಹಿಳೆಗೆ 10 ವರ್ಷದ ಮಗಳೊಬ್ಬಳಿದ್ದಾಳೆ, ಹಾಗೆಯೇ ಹಲ್ಲೆಗೊಳಗಾದ ಆಕೆಯ ಬಾಯ್‌ಫ್ರೆಂಡ್‌ಗೆ ಈಗಾಗಲೇ ಮೂರು ಮಕ್ಕಳಿದ್ದಾರೆ.ಗುಲ್ಶನ್ ಮಹಿಳೆಗೆ ನೀಡಿದ್ದ ಹಣವನ್ನು ವಾಪಸ್ ಕೇಳಲು ಹೋದಾಗ ಹಲ್ಲೆ ನಡೆದಿದೆ. ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಬರಬೇಕಾಯ್ತು ಎಂದು ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.