newsics.com
ಹಣವಿಲ್ಲದೆ ಜೀವನ ನಡೆಸೋದು ಕಷ್ಟ. ಹಾಗಂತ ಹಣ ಇದ್ದವರೆಲ್ಲ ನೆಮ್ಮದಿಯಿಂದ ಜೀವನ ನಡೆಸ್ತಿದ್ದಾರೆ ಅನ್ನೋದು ಸುಳ್ಳು. ಅತಿಯಾದರೆ ಅಮೃತವೂ ವಿಷವೇ ಎಂಬ ಗಾದೆ ಕೇಳಿ ಇರುತ್ತೀರಿ. ಹೌದು ಹಣ ಎಷ್ಟೇ ಇದ್ದರೂ ನೆಮ್ಮದಿ ಇಲ್ಲದೆ ಇದ್ದರೆ ಹೇಗೆ. ಇಲ್ಲಿ ಒಬ್ಬನಿಗೆ ಕೋಟಿ ಕೋಟಿ ಹಣ ಇದ್ದರು ಜೀವನದ ಬಗ್ಗೆ ನಿರಾಶೆ ಹೊಂದಿದ್ದಾನೆ. ಈತ ತನ್ನ ಜೀವನದ ಒತ್ತಡ ಬಗ್ಗೆ ರೆಡ್ಡಿಟ್ ನಲ್ಲಿ ಬರೆದಿದ್ದು, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೇ.
ಒತ್ತಡದ ಜೀವನದ ಬಗ್ಗೆ ಬರೆದಿದ್ದಾನೆ. ಹಣವಿದೆ ಆದ್ರೆ ನೆಮ್ಮದಿ ಇಲ್ಲ. ಆತನ ಬಳಿ 2.5 ಕೋಟಿ ಮೌಲ್ಯದ ಆಸ್ತಿ ಇದ್ರೂ ನಿರಾಶೆ ಜೀವನವನ್ನು ಸಾಗಿಸ್ತಿದ್ದಾನೆ.
ನನಗೆ 42 ವರ್ಷ. ನನಗೆ ಮದುವೆ ಆಗಿಲ್ಲ. ಮುಂದೆಯೂ ಮದುವೆ ಆಗುವ ಆಲೋಚನೆ ನನಗಿಲ್ಲ. ಬಹಳ ವರ್ಷಗಳ ಹಿಂದೆಯೇ ನನ್ನ ಪಾಲಕರು ತೀರಿಕೊಂಡಿದ್ದಾರೆ. ಎಲ್ಲ ಎಫ್ ಡಿ ಸೇರಿ ನನ್ನ ನಿವ್ವಳ ಆಸ್ತಿ 2.5 ಕೋಟಿ ಇದೆ. ಸಾಲ ಕೂಡ ನಾನು ಮಾಡಿಲ್ಲ ಎಂದು ಪೋಸ್ಟ್ ನಲ್ಲಿ ವ್ಯಕ್ತಿ ಬರೆದಿದ್ದಾನೆ. ಅಷ್ಟೇ ಅಲ್ಲ, ಅಮೆರಿಕಾದಲ್ಲಿ ನಾನು ಕೆಲ ಕಾಲ ನೆಲೆಸಿದ್ದೆ. ನನಗೆ 62 ವರ್ಷವಾಗ್ತಿದ್ದಂತೆ ತೆರಿಗೆಯ ನಂತ್ರ ನನಗೆ ತಿಂಗಳಿಗೆ ಸುಮಾರು1000 ಡಾಲರ್ ಅಂದ್ರೆ ಸುಮಾರು 85,660 ರೂಪಾಯಿ ಸಿಗುತ್ತದೆ ಎಂದು ಆತ ತನ್ನ ಬಗ್ಗೆ ಮಾಹಿತಿ ನೀಡಿದ್ದಾನೆ. 9 -6 ರ ಕೆಲಸ ಮಾಡಿ ನಾನು ಬೇಸತ್ತಿದ್ದೇನೆ. ನನಗೆ ಕೆಲಸದ ಟೆನ್ಷನ್ ದೀರ್ಘ ಸಮಸ್ಯೆಯಾಗಿದೆ. ನಾನು ಕೆಲ್ಸ ಬಿಟ್ಟರೆ ಇಂಥ ಕೆಲಸ ನನಗೆ ಮತ್ತೆ ಸಿಗೋದಿಲ್ಲ. ಆದ್ರೆ ಕೆಲಸದ ಡೆಡ್ ಲೈನ್ ಬಗ್ಗೆಯೇ ನಾನು ಹೆಚ್ಚು ಆಲೋಚನೆ ಮಾಡ್ತಿರುತ್ತೇನೆ. ಇದ್ರಿಂದ ನನಗೆ ಒತ್ತಡ ಜಾಸ್ತಿಯಾಗಿದೆ. ನನ್ನ ಆರೋಗ್ಯ ಹದಗೆಡುತ್ತಿದೆ. ಎಲ್ಲವನ್ನು ನಾನು ದ್ವೇಷಿಸಲು ಶುರು ಮಾಡಿದ್ದೇನೆ. ನಾನು ತಿಂಗಳಿಗೆ 50 ಸಾವಿರ ಖರ್ಚು ಮಾಡ್ತೇನೆ. ನಾನು ಈಗ ನಿವೃತ್ತಿ ಪಡೆಯಬಹುದಾ ಎಂದು ಆತ ಪ್ರಶ್ನೆ ಕೇಳಿದ್ದಾನೆ.
r/personalfinanceindia ರೆಡ್ಡಿಟ್ ಪುಟದಲ್ಲಿ, @Proud-Connection1580 ಹೆಸರಿನಲ್ಲಿ ವ್ಯಕ್ತಿ ತನ್ನ ನೋವನ್ನು ತೋಡಿಕೊಂಡಿದ್ದಾನೆ.
https://www.newsics.com/2025/04/15/dont-keep-these-things-in-your-bedroom-even-if-you-forget/