newsics.com
ಸಂಭಾಲ್: ಕಾರಿಗೆ ತರಕಾರಿ ಮಾರುತ್ತಿದ್ದ ತಳ್ಳುಗಾಡಿ ಟಚ್ ಆಯ್ತು ಎಂದು ಥಳಿಸಲು ಬಂದ ಕಾರು ಮಾಲೀಕನಿಗೆ ತಳ್ಳುಗಾಡಿಯಲ್ಲಿ ತರಕಾರಿ ಮಾರ್ತಿದ್ದ ಬೀದಿ ವ್ಯಾಪಾರಿಯೊಬ್ಬ ಸರಿಯಾಗಿ ಬಾರಿಸಿದ ಘಟನೆ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಈ ಘಟನೆ ನಡೆದಿದೆ. ಘರ್ ಕೇ ಕಲೇಶ್ ಎಂಬ ಎಕ್ಸ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ.ಟೊಮೆಟೋ, ಹೀರೆಕಾಯಿ ಮುಂತಾದ ಹಲವು ತರಕಾರಿಗಳನ್ನು ಇರಿಸಿಕೊಂಡು ಬೀದಿಯಲ್ಲಿ ತಳ್ಳುಗಾಡಿಯ ಮೂಲಕ ಸಣ್ಣ ವ್ಯಾಪಾರಿಯೊಬ್ಬ ಗಾಡಿಯನ್ನು ತಳ್ಳುತ್ತಾ ತರಕಾರಿ ಮಾರುತ್ತಾ ಸಾಗುತ್ತಿದ್ದ.
ಸಿಟ್ಟಿಗೆದ್ದು ಕಾರಿನಿಂದ ಇಳಿದು ಬರುವ ಮಾಲೀಕ ಬೀದಿ ವ್ಯಾಪಾರಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದರೆ ಬೀದಿ ವ್ಯಾಪಾರಿಯಾಗಿದ್ದರು ಧೃಡಕಾಯ ಹೊಂದಿದ್ದ ಆತ ತನ್ನ ಮೇಲೆ ಸವಾರಿ ಮಾಡಲು ಬಂದ ಕಾರು ಮಾಲೀಕನಿಗೆ ಸರಿಯಾಗಿ ಬಾರಿಸಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.newsics.com/2025/04/13/five-members-of-the-same-family-die/