newsics.com
ತಂದೆಯ ಶವಪೆಟ್ಟಿಗೆಯನ್ನು ಹೊತ್ತೊಯ್ಯುತ್ತಿದ್ದವರು ಇದ್ದಕ್ಕಿದ್ದಂತೆ ಗೋರಿಗೆ ಬಿದ್ದಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಅಮೆರಿಕದ ಫಿಲಡೆಲ್ಫಿಯಾದ ಅಂತ್ಯಕ್ರಿಯಲ್ಲಿ ನಡೆದಿದೆ.
ಬೆಂಜಮಿನ್ ಅವಿಲೆಸ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮಾರ್ಚ್ 21 ರಂದು ನಿಧನರಾದರು. ಅವರ ಅಂತ್ಯಕ್ರಿಯೆಯು ಶುಕ್ರವಾರ ಗ್ರೀನ್‌ಮೌಂಟ್ ಸ್ಮಶಾನದಲ್ಲಿ ನಡೆಯುತ್ತಿತ್ತು. ಈ ವೇಳೆ ಶೋಕತಪ್ತರು ನಿಂತಿದ್ದ ಗೋರಿಯ ವೇದಿಕೆ ಕುಸಿದುಬಿದ್ದಿದೆ. ಇದರಿಂದ ಶವಪೆಟ್ಟಿಗೆ ಹೊತ್ತೊಯ್ಯುತ್ತಿದ್ದವರು ಮತ್ತು ಕುಟುಂಬಸ್ಥರು ಗೋರಿಗೆ ಬಿದ್ದಿದ್ದಾರೆ.
ಶವಪೆಟ್ಟಿಗೆ ಹೊತ್ತೊಯ್ಯುತ್ತಿದ್ದವರು ಕಾಲು, ಕೈ ಮತ್ತು ಬೆನ್ನಿಗೆ ಗಾಯಗಳನ್ನು ಮಾಡಿಕೊಂಡಿದ್ದಾರೆ.
https://www.newsics.com/2025/04/11/have-you-heard-of-noni-fruit-juice/