newsics.com/ನ್ಯೂಸಿಕ್ಸ್
ಹೆಂಡತಿಯ ಅಮ್ಮನನ್ನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ನ್ಯಾಯಾಲಯದಲ್ಲಿ ನಡೆದಿದೆ.ಚೆಂಡು ಹೂವಿನ ಮಾಲೆ ಹಾಕಿಕೊಂಡಿರುವ ಯುವಕ, ಮದುಮಗಳಂತೆ ಅಲ್ಲದಿದ್ದರೂ, ನವ ವಧು ಕಳೆ ಹೊತ್ತು ಹಾರ ಹಾಕಿಸಿಕೊಂಡ ಅತ್ತೆ ಮದುವೆ ಸರ್ಟಿಫಿಕೇಟ್ ಹಿಡಿದು ಪೋಸ್ ಕೊಡುತ್ತಾ ನಿಂತಿರುವ ವಿಡಿಯೋಗಳು ಕಂಡು ಬಂದವು.
ಅಳಿಯ ಮತ್ತು ಅತ್ತೆಯ ನಡುವೆ ಕಳೆದ ಕೆಲವು ಸಮಯದಿಂದ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಷಯ ಯಾರಿಗೂ ತಿಳಿಯದಂತೆ ಗೌಪ್ಯವಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಜೀವಿಸಲು ನಿರ್ಧರಿಸಿ, ಯಾರಿಗೂ ತಿಳಿಸದಂತೆ ಮನೆಯಿಂದ ಓಡಿಹೋಗಿದ್ದಾರೆ.
ಮನೆಯಿಂದ ನಾಪತ್ತೆಯಾದ ದಂಪತಿಗಳು ನೇರವಾಗಿ ನ್ಯಾಯಾಲಯಕ್ಕೆ ತೆರಳಿ ಕಾನೂನುಬದ್ಧವಾಗಿ ನೋಂದಣಿ ಮದುವೆಯಾಗಿದ್ದಾರೆ. ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ತಮ್ಮ ಸಂಬಂಧಕ್ಕೆ ಕಾನೂನಿನ ರಕ್ಷಣೆ ಪಡೆಯಲು ಇಬ್ಬರೂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ಮಗಳ ಸಂಸಾರಕ್ಕೆ ಹೊಸ ದಿಕ್ಕು ನೀಡಬೇಕಾದ ತಾಯಿಯೇ, ಮಗಳ ಗಂಡನನ್ನು ಕೈಹಿಡಿದಿರುವುದು ಇಡೀ ಕುಟುಂಬಕ್ಕೆ ಮತ್ತು ಸ್ಥಳೀಯರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಆರ್ ಕೆ ಯಾದವ್ ಅವರು ಪೋಸ್ಟ್ನಲ್ಲಿ ಹಂಚಿಕೊಂಡಿದ್ದು ಹೀಗೆ, ಈಕೆ ಸಂಬಂಧಗಳು ಎನ್ನುವ ವ್ಯಾಖ್ಯಾನವನ್ನೇ ನಾಶ ಮಾಡಿದ್ದಾರೆ. ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಈಗ ಇದನ್ನು ಪ್ರೀತಿ ಎನ್ನಬೇಕೋ ಅಥವಾ ಆರೋಗ್ಯಕರ ಸಂಬಂಧ ಎನ್ನಬೇಕೋ ಎನ್ನುವುದೇ ನನ್ನ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.