newsics.com
ಸ್ಥಳೀಯ ಕೆರೆಯೊಂದರಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಿಡಿದ ಮೀನೊಂದನ್ನು ಬಾಯೊಳಗೆ ಹಾಕಿದ್ದು, ಈ ಮೀನು ಗಂಟಲಿನತ್ತ ಹೊರಳಿಕೊಂಡು ಉಸಿರುಕಟ್ಟಿದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಮದುರನ್‌ತಕಮ್ ಪ್ರದೇಶದಲ್ಲಿ ನಡೆದಿದೆ. 29 ವರ್ಷದ ಮಣಿಕಂಡನ್ ಸಾವಿಗೀಡಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಮೃತ ನಿವಾಸಿ ಮಣಿಕಂಡನ್ ಅರ್ಯಪಕ್ಕಂ ನಿವಾಸಿಯಾಗಿದ್ದಾರೆ. ದಿನಗೂಲಿ ಕಾರ್ಮಿಕನಾಗಿದ್ದ ಮಣಿಕಂಡನ್ ಆ ಪ್ರದೇಶದಲ್ಲಿ ತಮ್ಮ ಬರಿಗೈಲಿ ಮೀನು ಹಿಡಿಯುವ ಅಭ್ಯಾಸದಿಂದಲೇ ಹೆಸರುವಾಸಿಯಾಗಿದ್ದರು. ಎಂದಿನಂತೆ ಅವರು ನೀರು ಕಡಿಮೆ ಇದ್ದಂತಹ ಕೀಳವಳಮ್ ಕೆರೆಗೆ ನೀರು ಹಿಡಿಯಲು ಹೋಗಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಮಣಿಕಂಡನ್ ಮೊದಲಿಗೆ ಒಂದು ಮೀನು ಹಿಡಿದಿದ್ದಾರೆ. ಈ ವೇಳೆ ಇನ್ನೊಂದು ಮೀನನ್ನು ಇದೇ ಸಮಯದಲ್ಲಿ ಹಿಡಿದಿದ್ದು, ಮೊದಲು ಹಿಡಿದ ಮೀನನ್ನು ತಪ್ಪಿಸಿಕೊಂಡು ಹೋಗದಂತೆ ಬಾಯಲ್ಲಿ ತುಂಬಿಸಿದ್ದಾನೆ.
ಸ್ಥಳೀಯವಾಗಿ ಪಣಂಗೊಟೈ ಎಂದು ಕರೆಯಲ್ಪಡುವ ಜೀವಂತ ಮೀನು ಇದಾಗಿದ್ದು, ಹೊರಳುತ್ತಾ ಮಣಿಕಂಡನ್‌ನ ಗಂಟಲಿನತ್ತ ಹೋಗಿ ಸಿಲುಕಿಕೊಂಡಿದೆ. ಜೊತೆಯಲ್ಲಿದ್ದವರು ಆತನ ಸಹಾಯಕ್ಕೆ ಧಾವಿಸಿದರಾದರೂ ಮೀನನ್ನು ಗಂಟಲಿನಿಂದ ಹೊರತೆಗೆಯುವಲ್ಲಿ ವಿಫಲರಾದರು. ಗಂಟಲಿನಲ್ಲಿ ಸಿಲುಕಿದ ಮೀನನ್ನು ಹೊರತೆಗೆಯಲಾಗಲಿಲ್ಲ, ಪರಿಣಾಮ ಮಣಿಕಂಡನ್ ಗಂಟಲಿನಲ್ಲಿ ಮೀನು ಸಿಲುಕಿ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ. ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
https://www.newsics.com/2025/04/10/rare-golden-tiger-spotted/