newsics.com
ಮಾನವನ ದುರಾಸೆಯಿಂದಾಗಿ ಕಾಡೆಲ್ಲಾ ನಾಡಾದ ಪರಿಣಾಮ, ಕಾಡಿನಲ್ಲಿ ವಾಸಿಸಬೇಕಾದ ಜೀವಿಗಳೆಲ್ಲಾ ನಾಡಿಗೆ ಬರುವಂತಾಗಿದೆ. ಪ್ರಾಣಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿದೆ. ಇದೀಗ ಆನೆಯೊಂದು ಆಹಾರವನ್ನು ಹರಸುತ್ತಾ ಹಳ್ಳಿಯೊಂದಕ್ಕೆ ನುಗ್ಗಿದ ಅಂಗಡಿಯೊಂದರಿಂದ ಹಿಟ್ಟನ್ನು ಎಗರಿಸಿ,ಹಿಟ್ಟನ್ನು ತಿಂದು ತೇಗಿದೆ.ಸದ್ಯ ಈ ವಿಡಿಯೋ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಹೌದು ಉತ್ತರಾಖಂಡದ ಹರಿದ್ವಾರದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಾರುಕಟ್ಟೆಯ ಅಂಗಡಿಗೆ ಕಾಡಾನೆಯೊಂದು ಹಿಟ್ಟಿನ ಪ್ಯಾಕೆಟ್ ಪ್ಯಾಕೆಟ್ ಕದ್ದು ರಸ್ತೆಯಲ್ಲಿಯೇ ಹಿಟ್ಟನ್ನು ತಿಂದು ತೇಗಿದೆ. ಹರಿದ್ವಾರದಲ್ಲಿ ಹೆಚ್ಚಿನ ಹಳ್ಳಿಗಳು ಅರಣ್ಯ ಪ್ರದೇಶಗಳಿಗೆ ಅಂಟಿಕೊಂಡಿವೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾರುಕಟ್ಟೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ನಿಂದು ದೈತ್ಯ ಕಾಡಾನೆಯೊಂದು ಹಿಟ್ಟನ್ನು ಬಾಯಿಗೆ ಹಾಕಿಕೊಳ್ಳುತ್ತಿರುವಂತಹ ದೃಶ್ಯವನ್ನು ಕಾಣಬಹುದು.
https://x.com/ndtv/status/1909817486922391630
https://www.newsics.com/2025/04/09/google-pays-millions-of-dollars-to-employees-without-work/