newsics.com
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್, ಡೇಟಿಂಗ್ ಸಾಮಾನ್ಯವಾಗಿದೆ. ಆದರೆ ಈ ರೀತಿ ಹುಟ್ಟಿದ ಪ್ರೀತಿ ಬಹಳ ದಿನ ಬದುಕಿಲ್ಲದ ಉದಾಹರಣೆಗಳೇ ಹೆಚ್ಚು.
ಮೊದಲನೇ ಗಂಡನಿಗೆ ಕೈ ಕೊಟ್ಟ ಹೆಂಡತಿ ಇನ್ಸ್ಟಾಗ್ರಾಮ್ನಲ್ಲಿ ಒಂದು ವಾರದ ಹಿಂದೆ ಪರಿಚಯವಾದ ಪ್ರಿಯಕರನ ಜೊತೆ ಮದುವೆಯಾದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ರಮೇಶ್ ಹಾಗೂ ನೇತ್ರಾವತಿಗೆ 13 ವರ್ಷದ ಹಿಂದೆಯೇ ಮದುವೆಯಾಗಿತ್ತು. ಇವರಿಬ್ಬರ ದಾಂಪತ್ಯಕ್ಕೆ ಒಂದು ಗಂಡು ಮಗುವೂ ಇದೆ.
ಈಕೆಗೆ ಸೋಶಿಯಲ್ ಮೀಡಿಯಾ ಹುಚ್ಚು ಹೆಚ್ಚಾಗಿತ್ತು. ಇನ್ಸ್ಟಾದಲ್ಲಿ ಪರಿಚಯವಾದ ಸಂತೋಷ್ ಜೊತೆ ನೇತ್ರಾವತಿ ಚಾಟಿಂಗ್ ಮಾಡುತ್ತಿದ್ದರು. ಬಳಿಕ ಸ್ನೇಹವಾಗಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ದೇವಸ್ಥಾನದಲ್ಲಿ ಒಂದು ವಾರದ ಹಿಂದೆ ಸಂತೋಷ್ ಜೊತೆ ನೇತ್ರಾವತಿ ಮದುವೆ ಆಗಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗಿರುವ ಮೊದಲ ಪತಿ ರಮೇಶ್ ನೆಲಮಂಗಲ ಟೌನ್ ಠಾಣೆ ಮೆಟ್ಟಿಲೇರಿದ್ದಾನೆ.
https://www.newsics.com/2025/04/09/gajaraja-ate-a-packet-of-flour-from-a-shop-and-was-delighted/