ಕಾಯಕವೇ ಕೈಲಾಸ ಅಂತಾರೆ. ಕೆಲಸಕ್ಕಾಗಿ ಜನರು ದಿನನಿತ್ಯ ಅಲೆದಾಡುತ್ತಿರುತ್ತಾರೆ. ಒಳ್ಳೆ ಕೆಲಸ, ಉತ್ತಮ ಸಂಬಳ ಸಿಗಬೇಕು ಅನ್ನೋದು ಎಲ್ಲರ ಆಸೆ. ಆದರೆ ಈ ಕೆಲಸಗಳಲ್ಲಿ ಲಕ್ಷಗಟ್ಟಲೇ ಸಂಬಳ ಕೊಡ್ತೀವಿ ಅಂದ್ರೂ, ಯಾರು ಈ ಕೆಲಸಗಳನ್ನ ಮಾಡುವುದಕ್ಕೆ ಮುಂದೆ ಬರಲ್ಲ. ಮನೆಯಲ್ಲಿ ಸುಮ್ಮನೇ ಕುಳಿತುಕೊಂಡು ಸಂಬಳ ಪಡೆಯಿರಿ ಎಂದು ಹೇಳುವ ಮೂಲಕವೇ ಕೆಲವು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ತಿದೆ ಗೂಗಲ್! ಯಾವ ಕೆಲಸ? ಇಲ್ಲಿದೆ ನೋಡಿ.?
ಹೌದು ಗೂಗಲ್ ಈ ಕೆಲಸಗಳಿಗೆ ಲಕ್ಷ ಲಕ್ಷ ಸಂಬಳ ಕೊಡುತ್ತಾರೆ. ಉದ್ಯೋಗಿಗಳು ಬೇರೆ ಕಡೆ ಕೆಲಸ ಹುಡುಕಿ ಹೋಗಬಾರದು ಎನ್ನುವ ಕಾರಣಕ್ಕೆ!ಗೂಗಲ್ ತನ್ನ ಉದ್ಯೋಗಿಗಳ ಮೇಲೆ, ವಿಶೇಷವಾಗಿ Google DeepMind ನಲ್ಲಿ ಕೆಲಸ ಮಾಡುವವರ ಮೇಲೆ ಸ್ಪರ್ಧಾತ್ಮಕವಲ್ಲದ ಒಪ್ಪಂದಗಳನ್ನು ಜಾರಿಗೊಳಿಸುತ್ತಿದೆ. ಈ ಮೂಲಕ, ಎಐನಲ್ಲಿ ನುರಿತ ಇರುವ ಉದ್ಯೋಗಿಗಳು ತಮ್ಮ ಈ ಐಡಿಯಾಗಳನ್ನು ತಮ್ಮ ಎದುರಾಳಿ ಕಂಪೆನಿಗಳಿಗೆ ಹೋಗಿ ನೀಡಿಬಿಟ್ಟರೆ ಎನ್ನುವ ಕಾರಣದಿಂದ ಈ ತಂತ್ರವನ್ನು ಅಳವಡಿಸಿಕೊಂಡಿದೆ.
ಈ ಒಪ್ಪಂದವು ಉದ್ಯೋಗಿಗಳು 12 ತಿಂಗಳವರೆಗೆ ಪ್ರತಿಸ್ಪರ್ಧಿ ಕಂಪೆನಿ ಸೇರುವುದನ್ನು ತಡೆಯುವುದು ಆಗಿದೆ. ಈ ಸಮಯದಲ್ಲಿ ಅವರಿಗೆ ಯಾವುದೇ ಕೆಲಸ ನೀಡದೇ ಸಂಬಳ ನೀಡಲಾಗುತ್ತಿದೆ. ಮೈಕ್ರೋಸಾಫ್ಟ್ AI ನ ಉಪಾಧ್ಯಕ್ಷ ಮತ್ತು DeepMind ನ ಮಾಜಿ ನಿರ್ದೇಶಕ ನಂಡೋ ಡಿ ಫ್ರೀಟಾಸ್ ರೂಪಿಸಿರುವ ಯೋಜನೆ ಇದಾಗಿದೆ.
ಇದು ಬೇರೆ ಕಂಪೆನಿಗಳ ಪಾಲಾಗುವದನ್ನು ವರ್ಷದ ಮಟ್ಟಿಗಾದರೂ ತಪ್ಪಿಸಲೇಬೇಕಾದ ಅನಿವಾರ್ಯತೆ ಕಂಪೆನಿಗೆ ಇದೆ. ಇಲ್ಲಿ ಕೆಲಸ ಮಾಡುವ ನುರಿತರು ಬೇರೆ ಕಂಪೆನಿಗೆ ಸೇರಿಕೊಂಡು ಇಲ್ಲಿಗಿಂತಲೂ ಅಲ್ಲಿ ಹೆಚ್ಚು ಸಂಬಳ ಪಡೆದು ಐಡಿಯಾಗಳನ್ನು ನೀಡಿಬಿಟ್ಟರೆ, ಅದು ಗೂಗಲ್ಗೆ ಭಾರಿ ಹೊಡೆದ ಬೀಳುತ್ತದೆ. ಆದ್ದರಿಂದ ಬೇರೆ ಕಂಪೆನಿಗಳಿಗೆ ಉದ್ಯೋಗಿಗಳು ಹೋಗುವುದು ಹಾಗೂ ಈ ಕ್ಷೇತ್ರದಲ್ಲಿ ನುರಿತರು ಬೇರೆ ಕಂಪೆನಿಗಳಿಗೆ ಸೇರಿ ಅಲ್ಲಿ ಇಂಥ ವಿನ್ಯಾಸಗಳ ಬಗ್ಗೆ ಚರ್ಚಿಸುವುದು ಗೂಗಲ್ಗೆ ಇಷ್ಟವಿಲ್ಲ. ಅದಕ್ಕಾಗಿಯೇ ಈ ಯೋಜನೆ! L
https://www.newsics.com/2025/04/09/bangladesh-surpasses-pakistan-flights-arrive-at-doorsteps/