newsics.com
ಬಳ್ಳಾರಿ: ಹಣ ಡಬ್ಲಿಂಗ್ ಮಾಡುವ ಅಮಿಷವೊಡ್ಡಿ ಖತರ್ನಾಕ್ ಆಸಾಮಿ ಮೋಸ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಹಣ ಡಬ್ಬಿಂಗ್ ಮಾಡುವುದಾಗಿ ಹೇಳಿ ಅಮಾಯಕ ಜನರಿಂದ 50 ಕೋಟಿಗೂ ಹೆಚ್ಚು ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿ ಪರಾರಿಯಾಗಿದ್ದಾನೆ.
ವಿಶ್ವನಾಥ್ ಹಣ ಪಡೆದು ವಂಚಿಸಿರುವ ಆರೋಪಿ. ಈತ ಮೊದಲು ಕಿರಾಣಿ ಅಂಗಡಿ ಇಟ್ಟಿದ್ದ. 5 ಸಾವಿರ ರೂಪಾಯಿಯ ಕಿರಾಣಿ ಸಾಮಾನುಗಳನ್ನು ಖರೀದಿಸಿದರೆ 2 ಸಾವಿರ ರೂ.ಮೌಲ್ಯದ ಅಡುಗೆ ಎಣ್ಣೆ ಕೊಡುವುದಾಗಿ ಹೇಳಿದ್ದ. ಅಲ್ಲದೇ 15 ಸಾವಿರ ರೂಪಾಯಿ ಕೊಟ್ಟರೆ ತಿಂಗಳಲ್ಲಿ 20 ಸಾವಿರ ಮಾಡಿಕೊಡುವುದಾಗಿ ಹಾಗೂ ಲಕ್ಷ ಹಣ ಕೊಟ್ಟರೆ ೪% ಬಡ್ಡಿ ಕೊಡುವುದಾಗಿ ಹೇಳಿದ್ದ.
ಅಷ್ಟೇ ಅಲ್ಲ ಎರಡು ತಿಂಗಳ ಕಿರಾಣಿ ತೆಗೆದುಕೊಂಡರೆ ಒಂದು ತಿಂಗಳ ಕಿರಾಣಿ ಉಚಿತ ಕೊಡುವುದಾಗಿ ಹೇಳಿದ್ದ. ಅದರಂತೆ ಕಿರಾಣಿಯನ್ನು ಒಂದು ತಿಂಗಳು ಫ್ರೀಯಾಗಿ ನೀಡಿದ್ದನಂತೆ. ಹೀಗೆ ಜನರ ನಂಬಿಕೆ ಗಿಟ್ಟಿಸಿಕೊಂಡ ಆಸಾಮಿ ದಿನದಿಂದ ದಿನಕ್ಕೆ ಮೋಸ ಮಾಡಲಾರಂಭಿಸಿದ್ದ. ಕಿರಾಣಿ ಅಂಗಡಿ ಮಾಲೀಕ ವಿಶ್ವನಾಥ್ ನನ್ನು ನಂಬಿ ಜನರು ಒಬ್ಬೊಬ್ಬರು ಲಕ್ಷ ಲಕ್ಷ ಹಣ ನೀಡಿದ್ದಾರೆ. ಹೀಗೆ ಜನರಿಂದ ಸುಮಾರು ೫೦ ಕೋಟಿ ಹಣ ಪಡೆದು ಆತ ಎಸ್ಕೆಪ್ ಆಗಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.