newsics.com
ನಮ್ಮ ಕಾಲುಗಳಿಗೆ ರಕ್ಷಾಕವಚ ಎಂದರೆ ಅದು ನಾವು ಹಾಕಿಕೊಳ್ಳುವ ಚಪ್ಪಲಿ ಅಥವಾ ಬೂಟು. ಇತ್ತೀಚಿನ ಆಧುನಿಕ ದಿನದಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ಗಳಿಂದಲೂ ಪಾದರಕ್ಷೆಯನ್ನು ತಯಾರು ಮಾಡಲಾಗುತ್ತಿದೆ. ಆದರೆ ಕೆಲವೊಮ್ಮೆ ಇವುಗಳೇ ನಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ.
ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಕಾರಣಗಳು ಇರಬಹುದು.ನಡೆದಾಡುವ ಸಮಯದಲ್ಲಿ ಚಿಕ್ಕ ಕಲ್ಲುಗಳು ಪಾದಕ್ಕೆ ಘಾಸಿಯಾಗುತ್ತದೆ ಎಂಬ ಕಾರಣಕ್ಕಾಗಿ ಇವುಗಳನ್ನು ಬಳಸುತ್ತೇವೆ.ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಆದರೆ ಈಗ ಕಾಲ ಬದಲಾಗಿದೆ.
ಇಂದಿನ ದಿನಗಳಲ್ಲಿ ಎಲ್ಲಾ ವಿಷಯಗಳಲ್ಲೂ ಬದಲಾವಣೆಯನ್ನು ಕೇಳುವ ಪರಿಸ್ಥಿತಿ ಎದುರಾಗಿದೆ.ಇಂದಿನ ಯುವ ಜನತೆ ಫ್ಯಾಷನ್ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.ನಾವೆಲ್ಲ ಚಿಕ್ಕವರಿದ್ದಾಗ ಒಂದೇ ಚಪ್ಪಲಿ ಬಳಸುತ್ತಿದ್ದೆವು.
ಅದು ಕಿತ್ತು ಹೋಗುವವರೆಗೂ ಮತ್ತೊಂದನ್ನು ಕೊಡಿಸುತ್ತಿರಲಿಲ್ಲ.ಹಿಂದೆ ಗ್ರಾಮಗಳಲ್ಲಿ ಊರಿನಲ್ಲಿ ಹೆಚ್ಚಿನ ಹಣಕಾಸು ಹೊಂದಿರುವವರು ಮಾತ್ರ ಬಳಸುತ್ತಿದ್ದರು.ಆದರೆ ಕಾಲ ಬದಲಾಗಿದೆ. ಈಗ ಒಂದೇ ಒಂದಲ್ಲ ಹತ್ತು ಹಲವು ಬಗೆಯ ಚಪ್ಪಲಿ ಮತ್ತು ಶೂ ಬಳಸುತ್ತಾರೆ. ಆದರೆ ಕೆಲವೊಂದು ಬಾರಿ ತಮಗೆ ಇಷ್ಟವಾದ ಚಪ್ಪಲಿಯನ್ನೇ ಅಥವಾ ಶೂಸ್ ಹೆಚ್ಚು ಬಾರಿ ಬಳಸುತ್ತೇವೆ.ನಿಮ್ಮ ಪಾದರಕ್ಷೆಗಳೊಂದಿಗೆ ನಿಮ್ಮ ಮನೆಯ ಮೂಲಕ ಹರಡುವ ಬ್ಯಾಕ್ಟೀರಿಯಗಳ ಸಂಖ್ಯೆಯ ನಡುವೆ ಸಾಕಷ್ಟು ವ್ಯತ್ಯಾಸವಿರುತ್ತದೆ. ಬೂಟುಗಳನ್ನು ಧರಿಸಿ ನೀವು ನಿಮ್ಮ ಮನೆ ಅಥವಾ ಮನೆಯ ಸುತ್ತಲೂ ನಡೆದಾಡಿದಾಗ ಬ್ಯಾಕ್ಟೀರಿಯಾಗಳು ಇರುತ್ತವೆ.
ಆದ್ದರಿಂದ ಇದು ಆರೋಗ್ಯಕರವಲ್ಲ. ಹಾಗಾಗಿ ಒಂದೇ ಬೂಟುಗಳನ್ನು ಧರಿಸಿ ಸುವುದನ್ನು ತಪ್ಪಿಸಬೇಕು.ಒಂದೇ ರೀತಿಯ ಶೂಸ್ ಅಥವಾ ಚಪ್ಪಲಿಗಳನ್ನು ಧರಿಸಿದಾಗ ಈ ರೀತಿಯ ಬೆವರು ಒಣಗಲು ತುಂಬಾ ಸಮಯ ಬೇಕಾಗುತ್ತದೆ ಮತ್ತು ನಿಮ್ಮ ಕಾಲಿನ ಆಕಾರಗಳನ್ನು ಕಳೆದುಕೊಳ್ಳಲು ಇದು ಕಾರಣವಾಗಬಹುದು.ಚಪ್ಪಲಿ ಅಥವಾ ಶೂ ನಲ್ಲಿ ಇರುವಂತಹ ಬೆವರು ಒಣಗದೆ ಧರಿಸುವುದರಿಂದ ಹಲವಾರು ರೀತಿಯ ಬ್ಯಾಕ್ಟೀರಿಯಗಳು ಅದರಲ್ಲಿರುತ್ತದೆ.ಬೆವರು ಒಣಗದೆ ಇರುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಗಳು ದುಪ್ಪಟ್ಟು ಆಗುವ ಸಾಧ್ಯತೆ ಇರುತ್ತದೆ.ಇದಕ್ಕಾಗಿ ಮರದ ಶೂಗಳನ್ನು ಬಳಸುವುದರಿಂದ ಯಾವುದೇ ಬೆವರಿನ ಅಂಶಗಳನ್ನು ಹೀರಿಕೊಳ್ಳಲು ಉತ್ತಮವಾಗಿರುತ್ತದೆ ಮತ್ತು ಮರವು ನಿಮ್ಮ ಪಾದರಕ್ಷೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಡುತ್ತವೆ.
ಪ್ರತಿದಿನ ನಿಮ್ಮ ಬೂಟುಗಳನ್ನು ಬದಲಾಯಿಸುವುದೂ ಉತ್ತಮ ಆರೋಗ್ಯದ ಸಂಕೇತವಾಗಿದೆ.ಈ ರೀತಿ ಚಪ್ಪಲಿ ಅಥವಾ ಶೂಗಳು ಹೆಚ್ಚು ಬಾಳಿಕೆ ಬರಬೇಕೆಂದರೆ ಅವುಗಳನ್ನು ಪರ್ಯಾಯವಾಗಿ ಬಳಸಬೇಕು. ಒಂದೇ ಜೋಡಿಯ ಶುಗಳನ್ನು ಪ್ರತಿನಿತ್ಯ ಧರಿಸುವುದರಿಂದ ಬೇಗ ಹಾಳಾಗುತ್ತವೆ ಮತ್ತು ನಿಮಗೆ ಒಂದೇ ರೀತಿಯ ಶೂಗಳನ್ನು ಧರಿಸಿದ ಅನುಭವವಾಗುತ್ತದೆ.ವ್ಯಾಯಾಮ ಮಾಡಿದ ನಂತರ ನಮ್ಮ ಬೂಟುಗಳನ್ನು ಒಂದು ಕಡೆ ಗಾಳಿ ಹೆಚ್ಚು ಆಡುವಂತೆ ಇಡಬೇಕು. ಇದರಿಂದ ನಮ್ಮ ಕಾಲುಗಳ ಬೆವರಿನ ವಾಸನೆಯಿಂದ ಉಂಟಾಗಿರುವ ಬೂಟುಗಳ ದುರ್ವಾಸನೆ ದೂರವಾಗುತ್ತದೆ. ಇದರ ಜೊತೆಗೆ ಶಿಲೀಂದ್ರಗಳ ಸೋಂಕು ಉಂಟಾಗುವುದು ಕೂಡ ತಪ್ಪುತ್ತದೆ.
https://www.newsics.com/2025/04/08/drink-jaggery-water-on-an-empty-stomach-in-the-morning/