newsics.com
ಹಲ್ಲುಗಳ ಶುಚಿಗೊಳಿಸುವಿಕೆಯು ಅದರ ದೀರ್ಘಕಾಲೀನ ಆರೋಗ್ಯದ ಹಿತದೃಷ್ಟಿಯಿಂದ ಮುಖ್ಯವಾಗಿದೆ.ಸೌಂದರ್ಯದ ದೃಷ್ಟಿಯಿಂದಲೂ ಅಂದದ ಹಲ್ಲುಗಳನ್ನು ಇಟ್ಟುಕೊಳ್ಳುವುದು ಮುಖ್ಯ.ಒಂದೇ ಹಲ್ಲುಜ್ಜುವ ಬ್ರಷ್‌ನ್ನು ವರ್ಷಗಟ್ಟಲೇ ಬಳಸಬಾರದು. ಇದರಿಂದಲೇ ಹಲ್ಲಿನ ಸಮಸ್ಯೆಗಳು ಕಾಡಬಹುದು.
ಎಷ್ಟು ದಿನಗಳಿಗೆ ಹಲ್ಲುಜ್ಜುವ ಬ್ರಷ್‌ನ್ನು ಬದಲಾಯಿಸಬೇಕು ಎಂಬ ಪ್ರಶ್ನೆ ಎಲ್ಲರಿಗೂ ಕಾಡುವುದು ಸಹಜ. ನೀವು ಒಂದೇ ಹಲ್ಲುಜ್ಜುವ ಬ್ರಷ್ ಅನ್ನು ದೀರ್ಘಕಾಲದವರೆಗೆ ಬಳಸಿದರೆ, ಅದು ನಿಮ್ಮ ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ. ಹೀಗಾಗಿ ಹಲ್ಲುಜ್ಜುವ ಬ್ರಷ್ ಅನ್ನು ಆಗಾಗ ಬದಲಾಯಿಸಬೇಕು
ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್ ಬ್ರಷ್ ಅನ್ನು ಬದಲಾಯಿಸಬೇಕು. ನಿಮ್ಮ ಬ್ರಷ್ ಅನ್ನು ನೀವು ಹೆಚ್ಚು ಕಾಲ ಬಳಸಿದರೆ ಬ್ರಷ್‌ನ ಎಳೆಗಳು ಹಾಳಾಗುತ್ತವೆ. ಇದರಿಂದ ಹಲ್ಲುಜ್ಜಿದರೂ ಕೂಡ ಸ್ವಚ್ಛವಾಗುವುದಿಲ್ಲ.
ಅಲ್ಲದೇ ಒಂದೇ ಟೂತ್ ಬ್ರಷ್‌ನ್ನು ಹೆಚ್ಚು ಕಾಲ ಬಳಸುವುದರಿಂದ ಬ್ರಷ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಹಲ್ಲಿನ ಹುಳುಕಿಗೆ ಕಾರಣವಾಗಬಹುದು. ಹೀಗಾಗಿ ಹಲ್ಲನ್ನು ರಕ್ಷಿಸಿಕೊಳ್ಳಲು ಹೇಗೆ ಹಲ್ಲುಜ್ಜುತ್ತೀರೋ ಅದೇ ರೀತಿ ಬ್ರಷ್‌ನ್ನು ಕೂಡ ಕಾಲಕಾಲಕ್ಕೆ ಬದಲಾಯಿಸುವ ಅಗತ್ಯವಿರುತ್ತದೆ.
ಒಂದು ಬಾರಿ ಜ್ವರ ಅಥವಾ ಇನ್ನಿತರ ಅನಾರೋಗ್ಯಕ್ಕೆ ಒಳಗಾಗಿ ಗುಣಮುಖವಾದ ಮೇಲೆ ನಿಮ್ಮ ಹಲ್ಲುಜ್ಜುವ ಬ್ರಷ್‌ನ್ನು ಬದಲಾಯಿಸಿ. ಇದು ಮರು ಸೋಂಕು ಹರಡುವಿಕೆಯನ್ನು ತಡೆಯುತ್ತದೆ. ಅನಾರೋಗ್ಯದ ವೇಳೆ ಹಲ್ಲುಜ್ಜಿದಾಗ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತ್ತೊಮ್ಮೆ ಸೋಂಕಿಗೆ ಒಳಗಾಗಬಾರದು ಎಂದರೆ ಅಗತ್ಯವಾಗಿ ನಿಮ್ಮ ಟೂತ್ ಬ್ರಷ್‌ಗಳನ್ನು ಬದಲಾಯಿಸಿ.