newsics.com
ಮುಂಬೈ: ಲ್ಲೊಬ್ಬ ವ್ಯಕ್ತಿ ತನ್ನ ಸಾಕು ನಾಯಿಯನ್ನು ಆಗಲೇ ಹೊರಟಿದ್ದ ರೈಲಿಗೆ ಮೊದಲು ಹತ್ತಿಸಲು ಹೋಗಿ ಅದು ರೈಲು ಹಾಗೂ ಪ್ಲಾಟ್ಫಾರಂ ನಡುವೆ ಸಿಕ್ಕಿ ಹಾಕಿಕೊಂಡು ನಂತರ ಕೆಳಗೆ ಬಿದ್ದಿದೆ. ಈ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಂಬೈನ ರೈಲು ನಿಲ್ದಾಣವೊಂದರಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಆಗ ತಾನೇ ಹೊರಟಿತ್ತು. ಬೋಗಿ ಸಂಖ್ಯೆ 193751 ರ ಬಳಿ ಮಾಲೀಕರೊಬ್ಬರು ತಮ್ಮ ನಾಯಿ ಜತೆಗೆ ರೈಲು ಹತ್ತಲು ಪ್ರಯತ್ನಿಸಿದ್ದರು. ಆದರೆ ನಾಯಿ ಮೇಲೆ ಹತ್ತಲಾಗದೆ ಕೆಳಗೆ ಬಿದ್ದಿದೆ. ಘಟನೆಯ ನಿಖರವಾದ ಸಮಯ ಮತ್ತು ಸ್ಥಳ ಇನ್ನೂ ತಿಳಿದಿಲ್ಲ.ಆದರೆ ನಾಯಿ ಪವಾಡವೆಂಬಂತೆ ಬದುಕುಳಿದಿದೆ ಎಂದು ಹೇಳಲಾಗುತ್ತಿದೆ.
ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪ್ರಾಣಿ ಹಿಂಸೆಗೆ ಸಂಬಂಧಿಸಿದ ಬಿಎನ್‌ಎಸ್ ವಿಭಾಗಗಳ ಅಡಿಯಲ್ಲಿ ಸಾಕುಪ್ರಾಣಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಿಸಿದ್ದಾರೆ.