newsics.com
ಬೆಂಗಳೂರು: ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರ್.
ಶಿಕ್ಷಕಿ ಜೊತೆ ರೌಡಿ ಸೇರಿ ಮೂವರನ್ನ ಸಿಸಿಬಿ ಬಂಧಿಸಿದೆ. ಖಾಸಗಿ ಪ್ರೀಸ್ಕೂಲ್ ನಡೆಸ್ತಿದ್ದ ಆರೋಪಿತೆಗೆ 2023 ರಲ್ಲಿ ಉದ್ಯಮಿ ಪರಿಚಯ ವಾಗಿತ್ತು. ತನ್ನ ಮಕ್ಕಳನ್ನು ಈಕೆಯ ಪ್ಲೇಹೋಮ್‌ಗೆ ಉದ್ಯಮಿ ಕಳುಹಿಸುತ್ತಿದ್ದರು. ಉದ್ಯಮಿಯಿಂದ ಶಾಲೆ ನಿರ್ವಹಣೆ ಸಲುವಾಗಿ ಆರೋಪಿತೆ 2 ಲಕ್ಷ ಸಾಲ ಪಡೆದಿದ್ದಳು. 2024 ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದಿದ್ದಳು.
ಹಣ ವಾಪಸ್ ಕೇಳಿದಾಗ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಬಳಿಕ ಉದ್ಯಮಿ ಮನೆಗೆ ತೆರಳಿದ್ದ ಆರೋಪಿತೆ, ಮುತ್ತಿಟ್ಟು ಐವತ್ತು ಸಾವಿರ ಪಡೆದಿದ್ದಳು. ಬಳಿಕ ನಿನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆಂದು ಆಫರ್ ನೀಡಿದ್ದಳು. ಈ ವೇಳೆ ಮತ್ತೆ ಹದಿನೈದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು.
ಮಾ.12 ರಂದು ಉದ್ಯಮಿ ಪತ್ನಿಗೆ ಆರೋಪಿತೆ ಕರೆ ಮಾಡಿದ್ದಳು. ಮಕ್ಕಳ ಸ್ಕೂಲ್ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್‌ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್‌ನಲ್ಲಿ ಆರೋಪಿತೆ ಜೊತೆ ಸಾಗರ್ ಮೋರೆ ಹಾಗೂ ಗಣೇಶ್ ಕಾಳೆ ಆರೋಪಿಗಳು ಹಾಜರಿದ್ದರು. ಸಾಗರ್‌ನನ್ನು ಉದ್ಯಮಿಗೆ ತೋರಿಸಿ ಆರೋಪಿತೆ ಆವಾಜ್ ಹಾಕಿದ್ದರು. ಸಾಗರ್ ಜೊತೆ ಆರೋಪಿತೆಗೆ ಎಂಗೇಜ್ಮೆಂಟ್ ಆಗಿದೆ. ಆದರೆ, ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ಆರೋಪಿತೆ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸ್ತೇನೆಂದು ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು
ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ.
–