newsics.com
ಬಂದೂಕು ಹಿಡಿದು ದರೋಡೆ ಮಾಡಲು ಬಂದವನಿಗೆ ಮಹಿಳೆಯೊಬ್ಬಳು ಗುಂಡು ಹಾರಿಸಿದ್ದು, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಬಂದೂಕು ಹಿಡಿದು ಗುಂಪಿನ ಬಳಿ ದರೋಡೆಕೋರ ಬಂದಿದ್ದಾರೆ. ಆದರೆ, ಗುಂಪಿನಲ್ಲಿದ್ದ ಮಹಿಳೆಯೊಬ್ಬರು ತಮ್ಮ ಬಳಿಯೂ ಬಂದೂಕು ಇರುವುದನ್ನು ಆತನಿಗೆ ತೋರಿಸುತ್ತಾರೆ.
ತಕ್ಷಣವೇ ಮಹಿಳೆ ದರೋಡೆಕೋರನಿಗೆ ಗುಂಡು ಹಾರಿಸುತ್ತಾರೆ. ಇದರಿಂದ ಆತ ಗಾಯಗೊಂಡು ನೋವಿನಿಂದ ನರಳುತ್ತಾ ತನ್ನ ಬಂದೂಕನ್ನು ಕೆಳಗೆ ಇಡುತ್ತಾನೆ. ಧೈರ್ಯದಿಂದ ದರೋಡೆ ವಿಫಲವಾಗುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
https://x.com/shockcctvclip/status/1906429612370141346
https://www.newsics.com/2025/03/31/nyamati-bank-robbery-case/