newsics.com
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಅತಿ ಕೆಟ್ಟ ವಿಮರ್ಶೆ ಪಡೆದಿದೆ. ಕೊಟ್ಟ ದುಡ್ಡಿಗೆ ನಷ್ಟವೇ ಆಗಿದೆ ಎಂದು ಸ್ವತಃ ಅಭಿಮಾನಿಗಳೇ ಹೇಳಿಕೊಳ್ಳುತ್ತಾ ಇದ್ದಾರೆ. ಸಿನಿಮಾನ ಜನರು ಇಷ್ಟಪಟ್ಟಿಲ್ಲ ಎಂಬುದಕ್ಕೆ ಕಲೆಕ್ಷನ್ ಲೆಕ್ಕವೇ ಸಾಕ್ಷಿ.
ಸಿಕಂದರ್‘ ಮೊದಲ ದಿನದ ಕಲೆಕ್ಷನ್ ಲೆಕ್ಕ ಹೊರ ಬಂದಿದೆ. ಸಲ್ಮಾನ್ ಖಾನ್ ಅವರ ಸಿನಿಮಾ ಹೀನಾಯ ಕಲೆಕ್ಷನ್ ಮಾಡಿರೋದು ಇಲ್ಲಿ ಸ್ಪಷ್ಟವಾಗಿದೆ. ಹಾಕಿದ ಬಜೆಟ್ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.
ಸಿಕಂದರ್ ಸಿನಿಮಾ ಭಾನುವಾರ ತೆರೆಕಂಡಿದ್ದು, 200 ಕೋಟಿ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಅದರಂತೆ, ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದ್ದು, ‘ಸಿಕಂದರ್’ ಚಿತ್ರವು ಮೊದಲ ದಿನ ಭಾರತದಲ್ಲಿ ಕೇವಲ 26 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಲ್ಮಾನ್ ಖಾನ್ ಅವರ ಈ ಹಿಂದಿನ ಅಂದರೆ 2023ರಲ್ಲಿ ತೆರೆಗೆ ಬಂದಿದ್ದ ಟೈಗರ್ 3 ಸಿನಿಮಾ ಮೊದಲ ದಿನವೇ 44.50 ಕೋಟಿ ಗಳಿಕೆ ಮಾಡಿತ್ತು.
ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕ ಮಂದಿ ಕೆಟ್ಟ ಕಮೆಂಟ್ಸ್ ಮಾಡಿದ್ದಾರೆ. ಮತ್ತೊಂದೆಡೆ ಆನ್ ಲೈನ್ನಲ್ಲಿ ಫಿಲಂ ಸೋರಿಕೆ ಅಗಿರೋದು ದೊಡ ಹಿನ್ನಡೆಯಾಗಿದೆ. ಒಟ್ನಲ್ಲಿ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ.
ALERT ಇನ್ಮುಂದೆ ಗೂಗಲ್ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ