newsics.com
ಬ್ಯಾಂಕಾಕ್: ಶುಕ್ರವಾರ ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಆಸ್ಪತ್ರೆ ಕಟ್ಟಡ ನೆಲಸಮವಾಗಿದೆ. ಇದರಿಂದ ಜನರು ನಲುಹೋಗಿದ್ದಾರೆ. ಆಸ್ಪತ್ರೆಗಳು ತೆರವುಗೊಂಡಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಕರೆತರುವಾಗ ಹೆರಿಗೆ ನೋವು ಶುರುವಾಗಿದ್ದು, ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬ್ಯಾಂಕಾಕ್‌ನ ಬಿಎನ್‌ಎಚ್ ಆಸ್ಪತ್ರೆ ಮತ್ತು ಕಿಂಗ್ ಚುಲಲಾಂಗ್‌ಕಾರ್ನ್ ಸ್ಮಾರಕ ಆಸ್ಪತ್ರೆಯ ರೋಗಿಗಳನ್ನು ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಕೆಲವು ರೋಗಿಗಳನ್ನು ಸ್ಟ್ರೆಚರ್ ಹಾಗೂ ವೀಲ್‌ಚೇರ್‌ಗಳಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು, ಬೀದಿಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.