newsics.com
ಚಂಡೀಗಢ್: ಹಸು ಮತ್ತು ಗೂಳಿ ಸೀದಾ ಬೆಡ್‍ರೂಂಗೆ ನುಗ್ಗಿದ್ದು ,ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು,ಹರಿಯಾಣದ ಫರಿದಾಬಾದ್‍ನ ಎನ್ಐಟಿ ಪ್ರದೇಶದ ದಬುವಾ ಕಾಲೋನಿಯಲ್ಲಿ ಮನೆಯ ಬೆಡ್‍ರೂಂಗೆ ಗೂಳಿ ಮತ್ತು ಹಸು ನುಗ್ಗಿದೆ .
ಗೂಳಿ ಮತ್ತು ಹಸುವನ್ನು ಬೆಡ್‍ರೂಂನಲ್ಲಿ ನೋಡಿದ ಮನೆಯ ಮಹಿಳೆ ಭಯದಿಂದ ತನ್ನ ರಕ್ಷಣೆಗಾಗಿ ಒಂದು ಗಂಟೆ ಕಾಲ ಕಬೋಡ್‍ನ ಹಿಂದೆ ಅಡಗಿಕೊಂಡಿದ್ದಾಳೆ.
ವಿಷಯ ತಿಳಿದ ನೆರೆಹೊರೆಯವರು ಆಕೆಯ ಮನೆಗೆ ಬಂದು ಹಸು ಮತ್ತು ಗೂಳಿಯನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಮನೆಯ ಬೆಡ್‍ರೂಂ ಹೊರ ಬಂದಿಲ್ಲ.. ನಂತರ, ಜನರು ಕೋಲುಗಳೊಂದಿಗೆ ಬೆಡ್‍ರೂಂಗೆ ಹೋಗಿ ಅವುಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ಪಟಾಕಿಗಳನ್ನು ಸಿಡಿಸಿ ಅವೆರಡನ್ನು ಯಶಸ್ವಿಯಾಗಿ ಮನೆಯಿಂದ ಹೊರಗೆ ಓಡಿಸಲಾಗಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.