newsics.com
ಸುನೀತಾ ವಿಲಿಯಮ್ಸ್ ಸಾಧನೆಗೆ ಇಡೀ ಜಗತ್ತೇ ಸಲಾಂ ಹೇಳುತ್ತಿದೆ. 8 ದಿನಗಳವರಗೆ ಬಾಹ್ಯಾಕಾಶಕ್ಕೆ ಹೋದ ಅವರು 9 ತಿಂಗಳ ಬಳಿಕ ಭೂಮಿಗೆ ಮರಳಿದ್ದಾರೆ. ಸದ್ಯ ಗಗನಯಾತ್ರಿಗಳು ಭೂಮಿಗೆ ಮರಳಿದ್ದಾರೆ, ಅವರ ಮುಖದಲ್ಲಿ ನಗು ಕಂಡಿದ್ದೇವೆ, ಆದರೆ ಅವರ ಸಂಕಷ್ಟ ಇಲ್ಲಿಗೆ ನಿಂತಿಲ್ಲ ಏಕೆಂದರೆ ಭೂಮಿಗೆ ಬಂದ ಈ ಭೂಮಿಗೆ ಒಗ್ಗಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಅವರು ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರಲ್ಲ, ಅಲ್ಲಿ ಮನುಷ್ಯರು, ವಸ್ತುಗಳು ಎಲ್ಲವೂ ತೇಲುತ್ತಾರೆ. ಗಗನಯಾತ್ರಿಗಳು ದೀರ್ಘ ಸಮಯ ಬಾಹ್ಯಾಕಾಶದಲ್ಲಿ ಇರುವಾಗ ಅವರಿಗೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಾಧ್ಯವಾಗಿರುವುದಿಲ್ಲ. ಇವರು ದೀರ್ಘ ಸಮಯ ಬಾಹ್ಯಾಕಾಶದಲ್ಲಿ ಕಳೆದರೆ ಸ್ನಾಯುಗಳು ದುರ್ಬಲವಾಗುವುದು. ಭೂಮಿಗೆ ಮರಳಿದ ತಕ್ಷಣ ನಿಂತುಕೊಳ್ಳಲು ಸಾಧ್ಯವಾಗಲ್ಲ.
ಮುಖದಲ್ಲಿ ಊತ ಕಂಡು ಬರುವುದು: ಭೂಮಿಗೆ ಮರಳಿದ ತಕ್ಷಣ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ, ತಕ್ಷಣವೇ ಎದ್ದು ನಿಲ್ಲಲು ಅವರಿಂದ ಸಾಧ್ಯವಾಗುವುದಿಲ್ಲ. ಮೂಳೆಗಳಲ್ಲಿ ನೋವು, ದೇಹದಲ್ಲಿ ನೀರಿನಂಶದಲ್ಲಿ ವ್ಯತ್ಯಾಸ ಈ ಬಗೆಯ ಸಮಸ್ಯೆ ಕಂಡು ಬರುವುದು.
ಅವರ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು: ಗಗನಯಾತ್ರಿಗಳು ಭೂಮಿಗೆ ಮರಳಿದಾಗ ಅವರಿಗೆ ನಿಲ್ಲಲು ಕಷ್ಟವಾಗುವುದು, ನಿಲ್ಲಲು ಪ್ರಯತ್ನಸಿದಾಗ ತಲೆಸುತ್ತು, ಸುಸ್ತು ಕಂಡು ಬರುವುದು, ಅವರ ಹೃದಯದ ಬಡಿತದಲ್ಲಿ ವ್ಯತ್ಯಾಸ ಕಂಡು ಬರುವುದು.
ಕಣ್ಣುಗಳು ಮಂಜಾಗುವುದು: ಗಗನಯಾತ್ರಿಗಳಿಗೆ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಕೂಡ ಇದೆ, ಅವರಿಗೆ ಕಣ್ಣು ಮಂಜಾದಂತೆ ಅನಿಸಲಾರಂಭಿಸುವುದು.
ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ: ತುಂಬಾ ಸಮಯ ಬಾಹ್ಯಾಕಾಶದಲ್ಲಿ ಇದ್ದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಹೃದಯ ಸಂಬಂಧಿ ಪರೀಕ್ಷೆ: ಸ್ವಲ್ಪ ಸಮಯದವರೆಗೆ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಬೇಕಾಗುತ್ತದೆ. ಇವರ ರಕ್ತದೊತ್ತಡವನ್ನು ಪರಿಶೀಲಿಸಲಾಗುವುದು, ಹೃದಯದ ಆರೋಗ್ಯದ ಸ್ಥಿತಿ ತಿಳಿಯಲು ಇಸಿಜಿ, ಎಕೋಗಾರ್ಡಿಯೋಗ್ರಾಮ್ ಮುಂತಾದ ಪರೀಕ್ಷೆ ಮಾಡಲಾಗುವುದು.
ಮೂಳೆಗಳ ಆರೋಗ್ಯಕ್ಕೆ ಪರೀಕ್ಷೆ ಮಾಡಲಾಗುವುದು: ಗಗನಯಾತ್ರಿಯನ್ನು ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗುವುದು. MRI ಮತ್ತು CT ಸ್ಕ್ಯಾನ್ ಕೂಡ ಮಾಡಿಸಲಾಗುವುದು.
ನರಗಳಿಗೆ ಸಂಬಂಧಿಸಿದ ಪರೀಕ್ಷೆ ಮಾಡಲಾಗುವುದು. ಅವರ ಮಾನಸಿಕ ಆರೋಗ್ಯದ ಮೇಲೆ ಪರೀಕ್ಷೆ ಮಾಡಲಾಗುವುದು.