newsics.com
ನಟಿ ಸೋನಾಕ್ಷಿ ಸಿನ್ಹಾ ಭಾರತದಲ್ಲಿ ತಾವು ಈಜುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಗರಂ ಆಗಿದ್ದಾರೆ.
ಭಾರತದಲ್ಲಿ ನಾನು ಬಿಕಿನಿ ಅಂದರೆ ಸ್ವಿಮ್ ಸ್ಯೂಟ್ ಧರಿಸುವುದಿಲ್ಲ ಎಂದಿದ್ದಾರೆ. ಹೌಟರ್‌ಫ್ಲೈ ಜೊತೆಗಿನ ಹೊಸ ಸಂದರ್ಶನದಲ್ಲಿ, ನಟಿ ಈಜುಡುಗೆ ಧರಿಸುವ ಬಗ್ಗೆ ಮಾತನಾಡಿದ್ದಾರೆ. ನಾನು ಯಾವಾಗಲೂ ಪ್ರಜ್ಞೆಯಲ್ಲಿ ಇರುತ್ತೇನೆ. ದೇಶದ ಹೊರಗೆ ಪ್ರಯಾಣಿಸುವಾಗ ಮಾತ್ರ ಬಿಕಿನಿ ಧರಿಸುತ್ತೇನೆ. ಭಾರತದಲ್ಲಿ ಹಾಗೆ ಮಾಡುವುದಿಲ್ಲ. ಏಕೆಂದರೆ ಭಾರತದಲ್ಲಿ ಯಾರು ಎಲ್ಲಿಂದ ಫೋಟೋ ತೆಗೆದುಕೊಳ್ಳುತ್ತಾರೆಯೋ ಹೇಳಲು ಬರುವುದಿಲ್ಲ, ಭಾರತ ಬಿಟ್ಟು ಬೇರೆ ದೇಶಗಳಲ್ಲಿ ಬಿಕಿನಿ ತೊಡುತ್ತೇನೆ, ಈಜುತ್ತೇನೆ. ಆದರೆ ಭಾರತದಲ್ಲಿ ಮಾತ್ರ ಹಾಗೆಲ್ಲಾ ಮಾಡಲು ಆಗುವುದಿಲ್ಲ’ ಎಂದಿದ್ದಾರೆ.
ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಬಿಕಿನಿ ಧರಿಸುವುದಿಲ್ಲವಾದರೆ, ಬಿಕಿನಿ ತೊಟ್ಟ ಫೋಟೋಗಳನ್ನು ಯಾಕೆ ಶೇರ್ ಮಾಡಿಕೊಳ್ಳುತ್ತಿ ಎಂದು ಪ್ರಶ್ನಿಸಿದ್ದಾರೆ. ಭಾರತೀಯರು ಬಿಟ್ಟು ಬೇರೆ ದೇಶದವರ ಮನಸ್ಥಿತಿ ಸರಿ ಇರುವುದಾದ್ರೆ ಬಿಕಿನಿ ಬಿಟ್ಟು ಬುರ್ಖಾ ತೊಟ್ಟಿಕೋ, ಯಾರೂ ಫೋಟೋ ಕ್ಲಿಕ್ಕಿಸಲ್ಲ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.