newsics.com
ಬಾಲಿವುಡ್ ಸ್ಟಾರ್ ದಂಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೀಗ ತಾವು ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಮಗುವಿನ ಸಾಕ್ಸ್‌ಗಳ ಫೊಟೋ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ನಟಿ ತಾವು ಬೇರೆಯದ್ದೇ ಕಾರಣಕ್ಕೆ ಗರ್ಭಿಣಿಯಾಗಲು ಇಚ್ಛಿಸುವುದಾಗಿ ಈ ಹಿಂದೆ ಹೇಳಿದ್ದರು. ಅದರ ವಿಡಿಯೋ ಈಗ ಪುನಃ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ನಟಿ, ಕೆಲ ವರ್ಷಗಳಿಂದಲೂ ಗರ್ಭಧಾರಣೆಯ ಬಗ್ಗೆ ಯೋಚಿಸುತ್ತಿದ್ದೆ.
ಗರ್ಭಿಣಿಯಾಗಲು (Pregnant) ಬಹಳ ದಿನಗಳಿಂದ ಬಯಸಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಕೊಟ್ಟಿರೋ ಕಾರಣ ಮಾತ್ರ ಸಕತ್ ಫನ್ನಿಯಾಗಿದೆ.
ನನಗೆ ಗರ್ಭಿಣಿಯಾಗಲು ಇಷ್ಟ ಏಕೆಂದರೆ… ಆ ಸಮಯದಲ್ಲಿ ಏನು ಬೇಕಾದರೂ ತಿನ್ನಬಹುದು, ಅದನ್ನು ತಿನ್ನಬೇಡ, ಇದನ್ನು ತಿನ್ನಬೇಡ ಎಂದು ತಡೆಯುವವರು ಯಾರೂ ಇರುವುದಿಲ್ಲ. ಏಕೆಂದರೆ ಗರ್ಭಿಣಿಗೆ ಬಯಕೆ ಇರುತ್ತದೆ ಎಂದು ಸುಮ್ಮನಾಗ್ತಾರೆ. ಅದಕ್ಕೇ ನನಗೆ ಗರ್ಭ ಧರಿಸಲು ಇಷ್ಟವಿದೆ ಎಂದು ನಕ್ಕಿರುವ ನಟಿ, ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಯಾವುದು ಆದರೂ ಪರವಾಗಿಲ್ಲ. ಆರೋಗ್ಯವಾಗಿದ್ರೆ ಸಾಕು ಎಂದಿದ್ದರು.
Health tips ಪ್ರೆಗ್ನೆನ್ಸಿಯನ್ನು ಕಿಟ್ ಇಲ್ಲದೆ ಈ ರೀತಿ ಮನೆಯಲ್ಲೇ ಚೆಕ್ ಮಾಡಿ