newsics.com
ಮೈಸೂರು: ನೆದರ್ಲ್ಯಾಂಡ್ ಹುಡುಗನ ಜೊತೆಗೆ ಮೈಸೂರಿನ ಹುಡುಗಿ ವಚನ ಮಾಂಗಲ್ಯ ಮೂಲಕ ಮದುವೆಯಾಗಿದ್ದಾರೆ.
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾ ರುಟ್ಗೆರ್ ಎಂಬುವವರ ಜೊತೆ ಪ್ರೀತಿಯಾಗಿತ್ತು. ಈ ಬಗ್ಗೆ ಎರಡು ಕುಟುಂಬಸ್ಥರು ಒಪ್ಪಿಗೆ ಕೂಡ ನೀಡಿದ್ದರು. ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ.
ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತಮಠದ ಡಾ ಗುರುಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಮದುವೆ ನಡದಿದೆ. ಈ ಅಪರೂಪದ ಮದುವೆಗೆ ಎರಡು ಕಡೆಯ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಇನ್ನೂ ನವ ದಂಪತಿಗಳಿಗೆ ಸಂಬಂಧಿಕರು ಶುಭ ಕೋರಿದ್ದಾರೆ.
ಮೈಸೂರಿನ ವಿದ್ಯಾ ನೆದರ್ಲ್ಯಾಂಡ್ನ ರುಟ್ಗೆರ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.